ಸುದ್ದಿ9 ಮೂಡುಬಿದರೆ :ಕರ್ನಾಟಕದ ಜಮಖಂಡಿಯಲ್ಲಿ ಜರುಗಿದ 4ನೇ ಅಖಿಲ ಭಾರತ ಮಹಿಳಾ ಹಿಂದ್ ಕೇಸರಿ ಪ್ರಶಸ್ತಿಯಲ್ಲಿ ಆತಿಥೇಯ ಕರ್ನಾಟಕದ ಆಳ್ವಾಸ್ ಕಾಲೇಜಿನ ಆತ್ಮಶ್ರೀ ದ್ವಿತೀಯ ಸ್ಥಾನದೊಂದಿಗೆ 25,000 ರೂಪಾಯಿ ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ಅಖಿಲ ಭಾರತ ಮಹಿಳಾ ಹಿಂದ್ ಕೇಸರಿ ಕುಸ್ತಿ ಪಂದ್ಯಾಟದಲ್ಲಿ ಫೈನಲ್ ಹಂತಕ್ಕೆ ತಲುಪಿದ ರಾಜ್ಯದ ಏಕೈಕ ಮಹಿಳೆ ಎನ್ನುವ ಹೆಗ್ಗಳಿಕೆಗೂ ಆತ್ಮಶ್ರೀ ಪಾತ್ರರಾಗಿದ್ದಾರೆ.
ರಾಷ್ಟ್ರೀಯ ಮಹಿಳಾ ಕುಸ್ತಿ ಧನಶ್ರೀ ಪಾಟೀಲ 48ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಅನುಶ್ರೀ 63ಕೆಜಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

