ಕಟ್ಟಡ ಪರವಾನಿಗೆ ಸಭೆಯಲ್ಲಿ ನಿರ್ಣಯ
ಸುದ್ದಿ9 ಮೂಡುಬಿದರೆ: ಪುರಸಭಾ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ನೀಡುವುದಕ್ಕಿಂತ ಮೊದಲು ನೀಲಿ ನಕಾಶೆಯ ಪರಿಶೀಲಿಸಿ, ನಿಯಮಕ್ಕೆ ಅನುಗುಣವಾಗಿದ್ದರೆ ಮಾತ್ರ ಪರವಾನಿಗೆ ನೀಡುವ ಬಗ್ಗೆ ಪುರಸಭಾ ವಿಶೇಷ ಸಭೆಯಲ್ಲಿ ನಿರ್ಣಯಿಸಲಾಯಿತು.
ಪ್ರಮುಖ ನಿರ್ಣಯಗಳು:
ಪುರಸಭೆ ಕಟ್ಟಡ ಪರವಾನಿಗೆ ಸಮಿತಿಯ ಪ್ರಥಮ ಸಭೆಯಲ್ಲಿ ಪರವಾನಿಗೆ ನೀಡುವ ಬಗ್ಗೆ ಚರ್ಚೆ ನಡೆಯಿತು. ಸಾರ್ವಜನಿಕ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸಾಮಾಗ್ರಿ ಶೇಖರಿಸುವುದಾದರೆ ಈ ಬಗ್ಗೆ ಪುರಸಭೆಯಿಂದ ಅನುಮತಿ ಪಡೆಯಬೇಕು. ಪುರಸಭಾ ಇಂಜಿನಿಯರ್ ಅದನ್ನು ಪರಿಶೀಲಿಸಬೇಕು . ಕಟ್ಟಡಗಳಲ್ಲಿ ಎಷ್ಟು ಸಂಖ್ಯೆಯ ಡೋರ್‍ನಂಬರ್‍ಗಳು ಇರುತ್ತವೆಯೋ ಅಷ್ಟೇ ಸಂಖ್ಯೆಯ ಪಾರ್ಕಿಂಗ್ ಇದ್ದರೆ ಮಾತ್ರ ಪರವಾನಿಗೆ ಕೊಡಬೇಕು.ಕೆಲವು ಬಿಲ್ಡರ್‍ಗಳು ನೋಟೀಸ್ ಕೊಟ್ಟರೂ ಅಕ್ರಮ ನಿರ್ಮಾಣ ಮುಂದುವರೆಸುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮಕ್ಕೆ ಪುರಸಭೆ ಮುಂದಾಗಲಿದೆ ಸಹಿತ ಹಲವು ನಿರ್ಣಯ ಕೈಗೊಳ್ಳಲಾಯಿತು. ಮಳೆಕೊಯ್ಲು ಸಾಧನಗಳ ಅಳವಡಿಕೆ ಸಾಧನ ಕಡ್ಡಾಯಗೊಳಿಸುವ ಬಗ್ಗೆಯೂ ಚರ್ಚೆ ನಡೆಯಿತು.
ಈಗಾಗಲೇ ಲೈಸನ್ಸ್ ಪಡೆದು ನಿರ್ಮಾಣ ಹಂತದಲ್ಲಿರುವ ಎಲ್ಲಾ ಕಟ್ಟಡಗಳಿಗೆ ಪುರಸಭಾ ಇಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದೂ ಕಟ್ಟಡ ಪರಿಶೀಲನಾ ಸಮಿತಿಯ ಸದಸ್ಯರು ಆಗ್ರಹಿಸಿದ್ದಾರೆ.
mbd_feb2_5

By Suddi9

Leave a Reply

Your email address will not be published. Required fields are marked *