ಸುದ್ದಿ 9ಮೂಡಬಿದಿರೆ: ಇಲ್ಲಿನ ಮರಿಯಾಡಿ ಒಂದನೇ ವಾಡರ್್ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ರಾಜೇಶ್ ಕೋಟೆಕಾರ್ ಜಯಗಳಿಸಿದ್ದಾರೆ. ಪುರಸಭಾ ಸದಸ್ಯರಾಗಿದ್ದ ಶಿವರಾಜ್ ರೈ ನಿಧನದ ನಂತರ ತೆರವಾಗಿದ್ದ ಈ ವಾಡರ್್ಗೆ ಮಾಚರ್್ 2ರಂದು ಉಪಚುನಾವಣೆ ನಡೆದಿತ್ತು. ರಾಜೇಶ್ ಅವರು ಬಿಜೆಪಿಯ ಮಂಜುನಾಥ್ ರೈ ಅವರನ್ನು 156 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ಬಾರಿಯೂ ಮಂಜುನಾಥ್ ರೈಯವರು ಶಿವರಾಜ್ ರೈ ಅವರ ವಿರುದ್ಧ ಸೋಲೊಪ್ಪಿದ್ದರು. ಮತ್ತೊಬ್ಬ ಸ್ಪಧರ್ಿ ಜೆಡಿಎಸ್ನ ಸುರೇಂದ್ರ ಶೆಟ್ಟಿ ಕೇವಲ 47 ಮತಗಳನ್ನು ಗಳಿಸಲಷ್ಟೇ ಶಕ್ತರಾದರು. ರಾಜೇಶ್ ಜೊತೆ ಸಚಿವ ಅಭಯಚಂದ್ರ ಜೈನ್ ಕೂಡಾ ಪುರಸಭಾ ಕಾಯರ್ಾಲಯದಲ್ಲಿ ಹಾಜರಿದ್ದು ಗೆಲುವಿನ ಸಂಭ್ರಮ ಆಚರಿಸಿದರು
