ಬಂಟ್ವಾಳ: ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ, ವ್ಯಸನಮುಕ್ತ ಕನಾಟಕದ ನಿರ್ಮಾ ಣದ ಜಾಗೃತಿಯೊಂದಿಗೆ, ವಿವೇಕಾನಂದರ ಸಂದೇಶವನ್ನು ಸಾರುವ ಸದ್ದುದ್ದೇಶದೊಂದಿಗೆ ರಾಜ್ಯ ಬಿಜೆಪಿ ಯುವಮೋರ್ಚದ ವತಿಯಿಂದ ಬೆಳಗಾವಿಯಿಂದ ಹೊರಟಿರುವ ಯುವ ಚೈತನ್ಯ ಯಾತ್ರೆ ಜ.11ರಂದು ಸುರತ್ಕಲ್ ಮೂಲಕ ಜಿಲ್ಲೆಯನ್ನು ಪ್ರವೇಶಿಸಲಿದೆ ಎಂದು ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ರಂಜನ್ ಗೌಡ ತಿಳಿಸಿದರು.
images (1)
ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಅಂದು ಸಂಜೆ ಮಂಗಳೂರಿನ ಉರ್ವ ಮೈದಾನದಲ್ಲಿ ಬೃಹತ್ ಸಭೆ ನಡೆಯಲಿದ್ದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಬಳಿಕ ಕಾರ್ಕಳ ಶಾಸಕ ಸುನೀಲ್ ಕುಮಾರ್ ನೇತೃತ್ವದಲ್ಲಿ ಚೈತನ್ಯ ಯಾತ್ರೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನತ್ತ ಸಂಚರಿಸಲಿದ್ದು ಬೈಕ್ ರ್ಯಾಲಿಯ ಮೂಲಕ ಪುತ್ತೂರಿಗೆ ತಲುಪಲಿದೆ ಎಂದು ತಿಳಿಸಿದರು. ಸುಳ್ಯ, ಸಂಪಾಜೆಯ ಮೂಲಕ ಮಡಿಕೇರಿ ತಲುಪಿ ಜ.12ರಂದು ಮೈಸೂರಿನಲ್ಲಿ ಸಮಾಪನಗೊಳ್ಳಲಿದೆ ಎಂದರು.
ರಾಜ್ಯ ಯುವಮೋರ್ಚದ ಪ್ರಧಾನಕಾರ್ಯದರ್ಶೀ ತೇಜಸ್ವಿಸೂರ್ಯ ಮಾತನಾಡಿ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಯುವಜನತೆಗೆ ತಲುಪಿಸುವ ನಿಟ್ಟಿನಲ್ಲಿ ಯುವಮೋರ್ಚ ಚೈತನ್ಯ ಯಾತ್ರೆಯನ್ನು ಹಮ್ಮಿಕೊಂಡಿದೆ. ದೇಶದ ಯುವಶಕ್ತಿಯನ್ನು ಜಾಗೃತಗೊಳಿಸಿ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ತೊಡಗಿಸಿಕೊಳ್ಳುವ ಪ್ರಯತ್ನವಾಗಿದ್ದು ವಿವೇಕಾನಂದರು ಕರ್ನಾಟಕಕ್ಕೆ ಬಂದಿದ್ದಾಗ ತಂಗಿದ್ದ ಬೆಳಗಾವಿ ಹಾಗೂ ಮೈಸೂರನ್ನು ತಲುಪುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದರು.
ಡ್ರಗ್ ಮಾಫಿಯಾದಿಂದಾಗಿ ಕರ್ನಾಟಕ ಚಿಂತಾಜನಕ ಸ್ಥಿತಿಗೆ ತಲುಪಿದೆ. ರಷ್ಯನ್ ಡ್ರಗ್ ಮಾಫಿಯಾದ ಶಾಖೆಗಳಾಗಿ ಗೋಕರ್ಣ ಹಾಗೂ ಮಂಗಳೂರು ಗುರುತಿಸಿಕೊಂಡಿದೆ. ಈ ಕಾರಣಕ್ಕಾಗಿ ಉತ್ತರ ಹಾಗೂ ದಕ್ಷಿಣ ಕನ್ನಡದ ಭಾಗಗಳನ್ನು ಗುರಿಯಾಗಿಸಿಕೊಂಡು ಚೈತನ್ಯ ಯಾತ್ರೆ ಸಂಚರಿಸಿ ಡ್ರಗ್ ಮಾಫಿಯಾದ ವಿರುದ್ದ ಯುವ ಸಮುದಾಯವನ್ನು ಜಾಗೃತಗೊಳಿಸುವ ಕಾರ್ಯ ನಡೆಸಲಿದ್ದೆವೆ. ಈ ಮೂಲಕ ಕರ್ನಾಟಕವನ್ನು ಡ್ರಗ್ ಮಾಫಿಯಾದಿಂದ ಮುಕ್ತಿಗೊಳಿಸ ಬೇಕು ಎನ್ನುವ ಒತ್ತಾಯವನ್ನು ಸರ್ಕಾರಕ್ಕೆ ಮಾಡಲಿದ್ದೇವೆ ಎಂದು ವಿವರಿಸಿದರು.
ಯುವಮೋರ್ಚದ ರಾಜ್ಯ ಉಪಾಧ್ಯಕ್ಷ ಕಿಶೋರ್ ಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಬ್ರಿಜೆಶ್ ಚೌಟ, ಪೃಥ್ವಿರಾಜ್ ಬಿ.ಸಿ.ರೋಡು ಪ್ರಮುಖರಾದ ವಸಂತ ಪೂಜಾರಿ, ರತ್ನಕುಮಾರ್ ಚೌಟ, ಹರೀಶ್ ಆಚಾರ್ಯ ರಾಯಿ, ಸುರೇಶ್ ಪೂಜಾರಿ, ಕಮಲ್, ಸಂದೇಶ್ ಮತ್ತಿತರರು ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

By Suddi9

Leave a Reply

Your email address will not be published. Required fields are marked *