ಬಂಟ್ವಾಳ: ಪುರಸಭೆಯಿಂದ ಮಂಗಳೂರಿಗೆ ಕಸ ವಿಲೇವರಿಗೆ ತಿಂಗಳಿಗೆ ಲಕ್ಷಾಂತರ ರೂ. ವ್ಯಯ ಮಾಡಿದರು ಕೂಡಾ ಗುತ್ತಿಗೆದಾರ ಹಣವನ್ನು ಪಡೆದುಕೊಂಡು ಕಸವನ್ನು ಮಂಗಳೂರಿಗೆ ಕೊಂಡು ಹೋಗದೆ ಸರ್ಕಲ್ ಬಳಿಯೇ ರಾಸಿ ಹಾಕಿ ಬೆಂಕಿ ಕೊಟ್ಟ ಘಟನೆ ನಡೆದಿದೆ.

benki (1)

benki (2)

benki (3)

 

ಇಂದು ಕೂಡಾ ಲಾರಿಯಲ್ಲಿ ಕಸವನ್ನು ತಂದು ಇಲ್ಲಿ ಡಂಪ್ ಮಾಡಿ ಬೆಂಕಿ ಕೊಟ್ಟಿದ್ದು ಕೊನೆಗೆ ಅಗ್ನಿಶಾಮಕ ದಳ ಸಕಾಲದಲ್ಲಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಪುರಸಭೆ 1.45 ಲಕ್ಷ ರೂ ನ್ನು ಗುತ್ತಿಗೆದಾರನಿಗೆ ನೀಡುತ್ತಿದೆ ಆದರೆ ಆತ ಕಸವನ್ನು ಮಂಗಳೂರಿಗೆ ಕೊಂಡು ಹೋಗದೆ ಅದನ್ನು ಇಲ್ಲಿಯೇ ಬೆ<ಕಿ ಕೊಟ್ಟು ಆತನ ಜೇಬಿಗೆ ಲಕ್ಷಾಂತರ ರೂ ಪಡೆಯುತ್ತಿದ್ದಾನೆ. ಇದು ಪುರಸಭೆ ಆತ ಮಾಡುವ ಅನ್ಯಾಯ ಎಂದು ಪುರಸಭಾ ಸದಸ್ಯ ಸದಾಶಿವ ಬಂಗೇರ ಸ್ಥಳಕ್ಕೆ ಆಗಮಿಸಿ ಆರೋಗ್ಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಪುರಸಭೆ ಪ್ಲಾಸ್ಟಿಕ್ಕ್‍ನ್ನು ಮನೆಯಲ್ಲಿ ಉರಿಬಾರದು ಎಂದು ಹೇಳಿಕೊಂಡು ಬರುತ್ತಿದೆ ಆದರೆ ಪುರಸಭೆಯ ಕಸವನ್ನು ಪ್ಲಾಸ್ಟಿಕ್ ಗಳನ್ನು , ತ್ಯಾಜ್ಯಗಳನ್ನು ಕೆಮಿಕಲ್ ವಸ್ತುಗಳನ್ನು ಇಲ್ಲಿ ಉರಿಸಲಾಗುತ್ತಿದೆ. ಇದು ಇಲ್ಲಿನ ಸ್ಥಳೀಯ ಕಾಲೇಜು, ಶಾಲಾ ವಿದ್ಯಾರ್ಥಿಗಳ ಮತ್ತು ಸ್ಥಳೀಯ ಮನೆಯ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು. ಈ ಹಿನ್ನಲೆಯಲ್ಲಿ ಗುತ್ತಿಗೆದಾರನ ಮೇಲೆ ಕೂಡಲೇ ನೋಟೀಸ್ ಜಾರಿ ಮಾಡಿ ಎಂದು ತಿಳಿಸಿದರು.

By Suddi9

Leave a Reply

Your email address will not be published. Required fields are marked *