ನವದೆಹಲಿ: `ನಾನು ಐಪಿಎಲ್ ಪಂದ್ಯದ ವೇಳೆ ಮೇಯ್ದಿದ್ದು ನಿಜ’ ಇದು ಕಳೆದ ವರ್ಷ ಭಾರೀ ಬಿರುಗಾಳಿ ಎಬ್ಬಿಸಿದ್ದ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಮಾಲೀಕ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್, ತನಿಖೆಯ ವೇಳೆ ನೀಡಿದ ಡೈಲಾಗ್. ದಾರಾಸಿಂಗ್ ಜೊತೆ `ಫ್ರೆಂಡ್ಲಿ ಬೆಟ್ಟಿಂಗ್’ ನಡೆಸಿದ್ದಾಗಿ ಮೇಯಪ್ಪನ್ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ಧಾರೆ.

ಅಳಿಯನ ಬಣ್ಣ ಬಯಲಾಗಿರುವುದರಿಂದ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್`ಗೆ ಮತ್ತಷ್ಟು ಹಿನ್ನಡೆಯಾದಂತಾಗಿದೆ.
ಬೆಟ್ಟಿಂಗ್`ನಲ್ಲಿ ಮೇಯಪ್ಪನ್ ಕೈವಾಡದ ಬಗ್ಗೆ ತನಿಖೆಗೆ ಕಳೆದ ತಿಂಗಳಷ್ಟೇ ಸುಪ್ರೀಂಕೋರ್ಟ್, ಜಸ್ಟೀಸ್ ಮುಕುಲ್ ಮುದುಗಲ್ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಇದೀಗ ಸಮಿತಿ ಮೇಯಪ್ಪನ್ ಕೈವಾಡದ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಏ ವೇಳೆ ಮೇಯಪ್ಪನ್್ ತಪ್ಪೊಪ್ಪಿಕೊಂಡಿದ್ದು ಅತ್ಯಂತ ಮಹತ್ವ ಪಡೆದಿದೆ.
ಮೇಯಪ್ಪನ್ ಚೆನ್ನೈ ಸೂಪರ್ ಕಿಂಗ್ಸ್` ತಂಡದ ಪ್ರಮುಖರು. ಇದೀಗ ಬೆಟ್ಟಿಂಗ್ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿರುವದರಿಂದ ಐಪಿಎಲ್ ನಿಯಮಾವಳಿಗೆ ಧಕ್ಕೆಯುಂಟಾಗುವ ಸಾಧ್ಯತೆ ಇದೆ. ಹೀಗಾಗಿ, ಈ ಬಾರಿಯ ಐಪಿಎಲ್ ಸರಣಿಯಿಂದ ಚೆನ್ನೈ ತಂಡ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
