ವಾಮಂಜೂರು: ವಾಮಂಜೂರಿನ ಸೈಂಟ್ ಜೋಸೆಫ್ ಚರ್ಚ್ನಲ್ಲಿ ನೂತನ ವರ್ಷ 2015ನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಚರ್ಚ್ನಲ್ಲಿ ಹಲವಾರು ಫಾದರ್ಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳ ಮೂಲಕ ಹೊಸ ವರ್ಷಕ್ಕೆ ಭವ್ಯ ಸ್ವಾಗತ ನೀಡಲಾಯಿತು. ಈ ವೇಳೆ 2200 ಮಂದಿ ಉಪಸ್ಥಿತರಿದ್ದರು. ಆಗಮಿಸಿದವರುಗ ಬಿಸ್ಕಿಟ್ ಹಾಗೂ ಮಾಲ್ಟ್ ನೀಡಲಾಯಿತು. ನೂತನ ವರ್ಷ ಶುಭ ತರಲಿ ಎಂದು ಪ್ರಾರ್ಥಿಸಲಾಯಿತು.
ರೆವ್ ಫಾ ಸಿಪ್ರಿಯನ್ ಪಿಂಟೋ, ರೆವ್ ಫಾ ಮೆಲ್ವಿನ್ ಜಾನ್ ಡಿ’ಸೋಜಾ, ಸಹಾಯಕ ಧರ್ಮಗುರು ಫಾ| ಪ್ರಶಾಂತ್ ಸಿಕ್ವೇರಾ, ಫಾದರ್ ಅನಿಲ್ ವೇಗಸ್, ಫಾ ಡೆಂಜಿಲ್ ವೇಗಸ್, ಫಾ ಗ್ರೆಗೊರಿ ಡಿಸಿಲ್ವಾ, ಫಾದರ್ ಪ್ರವೀಣ್ ಪಿಂಟೊ ಮತ್ತು ಫಾ| ಫಾನ್ಸಿಸ್, ರೋಶನ್ ಕಾಮತ್, ಕಾರ್ಯದರ್ಶಿ ಜೋಕಿಮ್ ಡಿ’ಸೋಜಾ ಮುಖ್ಯ ಫಾದರ್ ರೆವ್ ಫಾದರ್ ವಿಕ್ಟರ್ ಮಚಾದೊ ಮುಂತಾದವರು ಉಪಸ್ಥಿತರಿದ್ದರು.
















