ಸುದ್ದಿ9 ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು. ಸಭಾ ಕಾರ್ಯಕ್ರಮದ ಆಅಧ್ಯಕ್ಷತೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಜಯರಾಮ್ ಭಟ್ ಪೊಳಲಿ, ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಬಂಟ್ವಾಳ ಮಹಲಿಂಗೇಶ್ವರ ದೇವಸ್ಥಾನದ ಆಡಳಿತ ಮಕ್ತೇಸರ ಡಾ.ಬಿ ರಮೇಶಾನಂದ ಸೋಮಯಾಜಿ, ಅನಂತಪದ್ಮನಾಭ ಉಪಧ್ಯಾಯ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ, ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ ಉಪಸ್ಥಿತರಿದ್ದರು. ರಾಮಭಟ್ ಸ್ವಾಗತಿಸಿ ,ಸುಬ್ರಾಯ ಕಾರಂತ ಧನ್ಯವಾದವಿತ್ತರು, ಜನಾರ್ಧನ ಅಮ್ಮುಂಜೆ ನಿರೂಪಿಸಿದರು,


























