ಬಂಟ್ವಾಳ : ತಾಲೂಕು ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಜ್ವಾಲಿ ಫ್ರೆಂಡ್ಸ್ ಇದರ ವಾರ್ಷಿ ಕೋತ್ಸವವು ಡಿ.31ರಂದು ಬುಧವಾರ ರಾತ್ರಿ 7.30ಕ್ಕೆ ನೆಲ್ಲಿಗುಡ್ಡೆ ಮೈದಾನದಲ್ಲಿ ಜರಗಲಿದೆ.
ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೆದ್ದಳಿಕೆ ಶಾಲಾ ಮುಖ್ಯಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಹಾಗೂ ಕಾವಳಮೂಡೂರು ಗ್ರಾ.ಪಂ.ನ ನಿವೃತ್ತ ಪಂ.ಅ. ಅಕಾರಿ ಗಣಪತಿ ಮುಚ್ಚಿನ್ನಾಯ ಕಲ್ಲಾಪು ಅವರನ್ನು ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಸಮ್ಮಾನಿಸಲಿರುವರು. ಬಳಿಕ ಕುಸಾಲ್ದ ಕುರುಲರಿ ಎಂಬ ತುಳು ಹಾಸ್ಯ ರಸಾವಳಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
