ಬಂಟ್ವಾಳ: ತಾಲೂಕಿನ ಕೆಂಪುಗುಡ್ಡೆ ಅಮ್ಟಾಡಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಸಮಿತಿ ವತಿಯಿಂದ 5ನೇ ವರ್ಷದ ಯಕ್ಷಗಾನ ಬಯಲಾಟ ಕೆಂಪುಗುಡ್ಡೆಯಲ್ಲಿ ಡಿ.31ರಂದು ಬುಧವಾರ ರಾತ್ರಿ 10ರಿಂದ ಜರಗಲಿದೆ.
ಡಿ.31ರಂದು ಬುಧವಾರ ರಾತ್ರಿ 7ರಿಂದ ವಿದ್ಯಾಥರ್ಿಗಳಿಂದ ನೃತ್ಯ ವೈಭವ, 8ರಿಂದ ಧಾಮರ್ಿಕ ಸಭೆ, ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಕಳವಾರು, ಬಾಳ ಅವರಿಂದ ನಾಗದೇವತೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಜ.3ರಂದು ಶನಿವಾರ ಸಂಜೆ 4ಕ್ಕೆ ಕುಂಪುಗುಡ್ಡೆ ಶನೀಶ್ವರ ಕಟ್ಟೆಯಲ್ಲಿ ಪೆದಮಲೆ ಶ್ರೀ ರಾಧಾಕೃಷ್ಣ ಭಟ್ ಅವರ ನೇತೃತ್ವದಲ್ಲಿ 5ನೇ ವರ್ಷದ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
