ಅಹಮದಾಬಾದ್: ಆಧ್ಯಾತ್ಮ ಸಾಧನೆ ನೀಡಿ ನೂರಾರು ಆಧ್ಯಾತ್ಮ ಶಿಬಿರಗಳನ್ನು ಏರ್ಪಡಿಸಿ ಸತ್ಸಂಗ, ಬಾಲಸಂಸ್ಕಾರ ನೀಡುತ್ತಿದ್ದ ಅಸಾರಾಂ ಬಾಪು ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದ 33 ವರ್ಷದ ಮಹಿಳೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿವಾಹ ನೆಪದಲ್ಲಿ ಊರಿಗೆ ತನ್ನ ಕುಟುಂಬ ಸಮೇತ ತೆರಳಿದ್ದ ಮಹಿಳೆ ಇದುವರೆಗೂ ವಾಪಸಾಗಿಲ್ಲ. ಆದರೆ ಪೊಲೀಸರು ಆಕೆಯ ಸಂಬಂಧಿಕರಿಗೆ ಮದುವೆ ಇತ್ತಾ ಎಂಬ ಬಗ್ಗೆ ತನಿಖೆ ನಡೆಸಿದಾಗ ಮದುವೆ ಇರಲಿಲ್ಲ ಎಂಬ ಅಂಶ ಬಯಲಾಗಿದೆ.
ಅಸರಾಂ ಬಾಪು ವಿರುದ್ಧ ಸುಳ್ಳು ದೂರು ನೀಡಿದ್ದರಿಂದ ಹೆದರಿ ಮಹಿಳೆ ತನ್ನ ಕುಟುಂಬ ಸಮೇತ ಊರು ಬಿಟ್ಟು ನಾಪತ್ತೆಯಾಗಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ದೂರು ದಾಖಲಿಸಿದ್ದ ಮಹಿಳೆ ಮತ್ತು ಆಕೆಯ ಕುಟಂಬಕ್ಕೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಅವರ ಭದ್ರತೆಗಾಗಿ ನಾಲ್ವರು ಪೊಲೀಸರನ್ನು ನೇಮಿಸಲಾಗಿತ್ತು. ಡಿಸೆಂಬರ್ 14ರಂದು ಮಹಿಳೆ ತಮ್ಮ ಸಂಬಂಧಿಕರ ಮದುವೆ ಅಮ್ರೋಲಿಯಲ್ಲಿ ಇದ್ದು ಅಲ್ಲಿಗೆ ತೆರಳುವುದಾಗಿ ತಿಳಿಸಿದ್ದರು. ಅಲ್ಲದೇ ಅಲ್ಲಿಗೆ ಪೊಲೀಸ್ ಭದ್ರತೆ ನಿರಾಕರಿಸಿದ್ದರು ಎಂದು ಸಬ್ಇನ್ಸ್ಪೆಕ್ಟರ್ ಎನ್ಎಂ ಅಹಿರ್ ಹೇಳಿದ್ದಾರೆ.
