ನವದೆಹಲಿ : ವಿಧಾನ ಸಭೆ ಲೋಕ ಸಭೆ ಚುನಾವಣೆಯಲ್ಲಿ ನಿರಂತರವಾಗಿ ಸೋಲಿನ ಕಹಿ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷ ತನ್ನ ಬಗ್ಗೆ ವಿಮರ್ಶೆ ಮಾಡಲಾರಂಭಿಸಿದೆ. ಸರಮಾಲೆಯಂತೆ ಸೋಲುತ್ತಿರುವುದರಿಂದ ಕಂಗೆಟ್ಟ ಕಾಂಗ್ರೆಸ್ ಪಕ್ಷದ ವರಿಷ್ಠರು ತಾವು ಹಿಂದೂ ಧ್ವೇಷಿಗಳಾಗಿ, ಅಲ್ಪಸಂಖ್ಯಾತರ ಪರವಾಗಿ ಚುನಾವಣೆ ಎದುರಿಸಿದ್ದರಿಂದ ಬಹುಸಂಖ್ಯಾತ ಹಿಂದೂಗಳು ಕಾಂಗ್ರೆಸ್ ಪಕ್ಷವನ್ನು `ಹಿಂದೂ ವಿರೋಧ ಪಕ್ಷ’ ಎಂದು ಬಗೆದು ಸೋಲಿನಂಚಿಗೆ ತಳ್ಳಿದರೇ ಎಂಬ ಬಗ್ಗೆ ಪಕ್ಷದ ವರಿಷ್ಠರು ಚಿಂತನೆ ಆರಂಭಿಸಿದ್ದಾರೆ.
ಜಾತ್ಯತೀತ ತತ್ವದಿಂದ ಚುನಾವಣೆ ಎದುರಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಹುಸಿ ಜಾತ್ಯತೀತತೆಯ ಬಗ್ಗೆ ಜನರು ಬೇಸರಗೊಂಡರೆ ಎಂಬ ಬಗ್ಗೆ ಚಿಂತನೆ ನಡೆಸುತ್ತಿರುವ ಪಕ್ಷದ ವರಿಷ್ಠರು ಈ ಬಗ್ಗೆ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ.
ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಬಹುಸಂಖ್ಯಾತರನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಅದರಿಂದ ಭಾರೀ ಹೊಡೆತ ಬೀಳಲಾರಂಭಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರ ಪರವಾಗಿ ತಂದ ಅನೇಕ ಕಾನೂನುಗಳು, ಸವಲತ್ತುಗಳು, ಹೇಳಿಕೆಗಳು ಹಾಗೂ ಹಿಂದೂ ವಿರೋಧಿ ಮಸೂದೆಯಿಂದ ಕಾಂಗ್ರೆಸ್ ಇದೀಗ ಭಾರೀ ಬೆಲೆಯನ್ನು ತೆರೆಯುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ರೀತಿ ಆತ್ಮವಿಮರ್ಶೆಗೆ ಮುಂದಾಗಿದೆಎನ್ನಲಾಗುತ್ತಿದೆ. ಹಿಂದೂಗಳನ್ನು ಯಾವ ರೀತಿ ಓಲೈಸಬೇಕು ಎಂಬಾ ಲೆಕ್ಕಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ತಾನು ಹಿಂದೂ ದ್ವೇಷಿನಾ ಎಂಬ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.
