ಬಜಪೆ : ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಂಎಸ್ಇಝಡ್ನ ಜಿಎಂಪಿಎಲ್ ಘಟಕದಿಂದ ಬಿಡುಗಡೆಯಾಗುತ್ತಿರುವ ಹಾರುಬೂದಿಯಿಂದ(ಪೌಡರ್ ಕಣಗಳು) ಜನವಸತಿ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗಿದೆ. ಪರಿಸರ ಮಂಡಳಿಯು ಈಗಾಗಲೇ ನೀಡಿರುವ ವರದಿಯನ್ವಯ ತಕ್ಷಣ ಕಂಪೆನಿ ಮುಚ್ಚಬೇಕು. ಇಲ್ಲವೇ ಕಂಪೆನಿಯು ವಸತಿ ಪ್ರದೇಶದ ಜಾಗ ಖರೀದಿಸಬೇಕು ಎಂದು ಆಗ್ರಹಿಸಿ ಬಜಪೆ ಪಟ್ಟಣ ಪಂಚಾಯತ್ ನ. ೩ರಂದು ಎಂಎಸ್ಇಝಡ್ ಮುಖ್ಯದ್ವಾರದ ಎದುರು ಬೃಹತ್ ರಸ್ತೆತಡೆ ಪ್ರತಿಭಟನೆ ನಡೆಸಿತು.

ಬಜಪೆ ಪ.ಪಂ ಅಧ್ಯಕ್ಷ ಲೋಕೇಶ್ ಪೂಜಾರಿ ಅವರ ನೇತೃತ್ವ ಹಾಗೂ ಪ.ಪಂ ಕೌನ್ಸಿಲರ್ಗಳ ಉಪಸ್ಥಿತಿಯಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ವಸತಿ ಪ್ರದೇಶದ ನೂರಾರು ಮಂದಿ ಸಂತ್ರಸ್ತರು ಇದ್ದರು.

ವಸತಿ ಪ್ರದೇಶಕ್ಕೆ ಹೊಂದಿಕೊAಡು ಇರುವ ಜಿಎಂಪಿಎಲ್ ಕಂಪೆನಿ ಇತ್ತೀಚೆಗೆ ಮತ್ತೊಂದು ರಾಸಾಯನಿಕ ಘಟಕ ಸ್ಥಾಪಿಸಿದೆ. ಇದರಿಂದ ನಿರಂತರ ಸ್ಪೋಟ, ಹಾರುಬೂದಿ ಹಾಗೂ ಕೆಮಿಕಲ್ ಹೊರ ಹೊಮ್ಮಿ ಶಬ್ದ ಹಾಗೂ ವಾಯು ಮಾಲಿನ್ಯ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಉಸಿರಾಟದ ತೊಂದರೆ, ಕೆಮ್ಮು, ಕಣ್ಣು ಮಂಜಾಗುವಿಕೆಯAತಹ ಗಂಭೀರ ಕಾಯಿಲೆಗಳು ಕಂಡು ಬಂದಿವೆ. ಹಾಗಾಗಿ ತಕ್ಷಣ ಈ ಕಂಪೆನಿ ಮುಚ್ಚಿ ಜನರಿಗೆ ನ್ಯಾಯ ಒದಗಿಸಬೇಕು ಎಂದು ಸ್ಥಳೀಯರು ಬಜಪೆ ಪ.ಪಂ ಹಲವು ಬಾರಿ ದೂರು ನೀಡಿದ್ದಾರೆ. ಈ ಬಗ್ಗೆ ಕಂಪೆನಿಯ ಗಮನಹರಿಸಲಾಗಿದ್ದರೂ ನಿರ್ಲಕ್ಷö್ಯ ತೋರಿದೆ. ಕಟ್ಟೆಕಡೆಯದಾಗಿ ಪ್ರತಿಭಟನೆ ನಡೆಸಿ ಜನರ ಹಕ್ಕು ಪ್ರತಿಪಾದಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಲೋಕೇಶ್ ಪೂಜಾರಿ ಮಾಧ್ಯಮಕ್ಕೆ ತಿಳಿಸಿದರು.

ಜಿಎಂಪಿಎಲ್ ಕಂಪೆನಿಯಿAದ ಶಾಂತಿಗುಡ್ಡೆ, ಧೂಮಾವತಿಧಾಮ, ಒಡ್ಡಿದಕಲ ಮತ್ತು ಕೊಂಚಾರು ಪ್ರದೇಶದ ಜನರ ನಿದ್ದೆಗೆಟ್ಟಿದೆ. ಈ ಬಗ್ಗೆ ಬಜ್ಪೆ ಪ.ಪಂ ಪರಿಸರ ಮಂಡಳಿಗೆ ಪತ್ರ ಬರೆದಿದ್ದು, ಮಂಡಳಿ ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರಿ ಆರಂಭಗೊಳ್ಳದ ಈ ಸ್ಟಾರ್ಟ್-ಅಪ್ ಕಂಪೆನಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯಕ್ಕೆ ಹೇತುವಾಗಿರುವ ಈ ಕಂಪೆನಿ ಮುಚ್ಚುವಂತೆ ಉನ್ನತ ಮಂಡಳಿಗೆ ವರದಿ ಮಾಡಿದೆ. ಆದರೆ ಇದುವರೆಗೂ ಜಿಲ್ಲಾಡಳಿತ ದಿಟ್ಟ ಕ್ರಮಕ್ಕೆ ಮುಂದಾಗಿಲ್ಲ ಎಂಬ ದೂರುಗಳು ಸ್ಥಳೀಯರಿಂದ ಬಂದಿವೆ.
ಪ್ರತಿಭಟನಕಾರರ ಬಂಧನ :
ಪ್ರತಿಭಟನೆ ಹಿನ್ನೆಲೆಯಲ್ಲಿ ಸೆಝ್ ಮಹಾದ್ವಾರದ ಬಳಿಕ ಭಾರೀ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು. ಜಿಎಂಪಿಎಲ್ ಸಿಇಒ ನಸ್ಕರ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿ, `ಕಂಪೆನಿಯಿAದ ಪರಿಸರವಾಸಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಮನವೊಲಿಸಲು ಪ್ರಯತ್ನಿಸಿದರು. ಕಂಪೆನಿ ಮಾತಿಗೆ ಜಗ್ಗದ ಜನರು ಪ್ರತಿಭಟನೆ ತೀವ್ರಗೊಳಿಸಿ ಘೋಷಣೆ ಕೂಗಿದರು. ಪರಿಸ್ಥಿತಿ ನಿಯಂತ್ರಣ ಮೀರುವ ಮುಂಚೆಯೇ ಪೊಲೀಸರು ಲೋಕೇಶ್ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ರಿತೇಶ್ ಶೆಟ್ಟಿ ಹಾಗೂ ಕೌನ್ಸಿಲರ್ಗಳ ಸಹಿತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸ್ಥಳೀಯರನ್ನು ಬಂಧಿಸಿ ಬಜ್ಪೆ ಪೊಲೀಸ್ ಠಾಣೆಗೆ ಕರೆದೊಯ್ದು, ಬಿಡುಗಡೆಗೊಳಿಸಿದ್ದಾರೆ.
“ಜನಪರ ಕೆಲಸ ಮಾಡುವ ನಾವು ಇಂತಹ ಬಂಧನಕ್ಕೆ ಜಗ್ಗುವುದಿಲ್ಲ. ಪರಿಸರ ಮಂಡಳಿ ವರದಿಗೆ ಜಿಲ್ಲಾಡಳಿತ ಮಾನ್ಯತೆ ನೀಡಲಿ. ಇಲ್ಲವೇ ಸೆಝ್ ವ್ಯಾಪ್ತಿಯ ಸಂತ್ರಸ್ತ ಜನರ ಒಡೆತನದಲ್ಲಿರುವ ಜಾಗ ಖರೀದಿಸಿ ಅವರಿಗೆ ನ್ಯಾಯ ಒದಗಿಸಲಿ. ಜನರಿಗೆ ನ್ಯಾಯ ಸಿಗದ ಹೊರತು ಹೋರಾಟ ನಿಲ್ಲದು” ಎಂದು ಬಜಪೆ ಪ.ಪಂ ಅಧ್ಯಕ್ಷ ಲೋಕೇಶ್ ಪೂಜಾರಿ ಅವರು ಪುನರುಚ್ಚರಿಸಿದರು.
