ಬಂಟ್ವಾಳ:ತಂಬಾಕು ಸೇವನೆಯಂತಹ ಮಾದಕ ದುಷ್ಚಟಗಳಿಗೆ ಹದಿಹರೆಯದ ವಿದ್ಯಾರ್ಥಿಗಳು ಬಲಿಯಾಗಬಾರದು. ವ್ಯಸನಗಳಿಂದ ಮುಕ್ತವಾದ ಸಮಾಜ ನಿರ್ಮಾಣವಾಗಬೇಕಾದರೆ ಯುವ ಜನಾಂಗಕ್ಕೆ ಸೂಕ್ತಮಾರ್ಗದರ್ಶನದ ಅಗತ್ಯವಿದೆ ಎಂದು ಮಂಗಳೂರು ಕೆ.ಎಮ್.ಸಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಶ್ರದ್ಧಾ ಹೇಳಿದರು.

ಲಯನ್ಸ್ ಕ್ಲಬ್ ಮಾಣಿ ,ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಹಿಳಾ , ಮಕ್ಕಳ ಮತ್ತು ವಯಸ್ಕರ ಉನ್ನತೀಕರಣ ಜಿಲ್ಲಾ ಸಂಸ್ಥೆ ಇವರ ಆಶ್ರಯದಲ್ಲಿ ಮಾಣಿ ಕರ್ನಾಟಕ ಹೈಸ್ಕೂಲ್ ನಲ್ಲಿ ಏರ್ಪಡಿಸಲಾದ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ರೊ.ಕಿರಣ್ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಇಬ್ರಾಹಿಂ ಕೆ ಮಾಣಿ , ರಾಷ್ಟ್ರೀಯ ಮಾನವ ಹಕ್ಕುಗಳ ದ.ಕ. ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಸಚ್ಚಿದಾನಂದ ರೈ ಪಾಳ್ಯ ಮುಖ್ಯ ಅತಿಥಿಯಾಗಿದ್ದರು. ಉಪಾಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಣಿ ಲಯನ್ಸ್ ಕ್ಲಬ್ನ ಉಪಾಧ್ಯಕ್ಷ ನಾರಾಯಣ ಸಾಲಿಯಾನ್ ಶುಭ ಹಾರೈಸಿದರು.
ಮುಖ್ಯೋಪಾದ್ಯಾಯ ಚೆನ್ನಪ್ಪ ಗೌಡ ,ಪಿಟಿಎ ಅಧ್ಯಕ್ಷ ಮೆಲ್ವಿನ್ ಮಾರ್ಟಿಸ್, ಮುಖ್ಯೋಪಾಧ್ಯಾಯಿನಿ ಸಾರಿಕಾ, ರವೀಂದ್ರ ರೈ, ಮಂಜುಳಾ ಕೆ.ಪಿ. ಉಪಸ್ಥಿತರಿದ್ದರು. ಲಯನ್ಸ್ ಕೋಶಾಧಿಕಾರಿ ರೊನಾಲ್ಡ್ ಮೊನಿಸ್ ವಂದಿಸಿದರು.ಶ್ಯಾಮಲ ಟೀಚರ್ ನಿರೂಪಿಸಿದರು.
