ಬಂಟ್ವಾಳ: ಬಿ.ಸಿ.ರೋಡಿನ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಶ್ರಯದಲ್ಲಿ ಶ್ರೀ ರಕೇಶ್ವರಿ ಕ್ರಿಕೆಟರ್ಸ್ ಬಿ.ಸಿ.ರೋಡ್ ಸಹಕಾರದೊಂದಿಗೆ 49 ವರ್ಷದ ಮೊಸರುಕುಡಿಕೆ ಉತ್ಸವವು ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು

ಇದೇ ಮೊದಲ ಬಾರಿಗೆ ಎಂಬಂತೆ ಬಿ.ಸಿ.ರೋಡ್ ನ ಕೈಕುಂಜೆಯಿಂದ ಶ್ರೀ ರಕೇಶ್ವರಿ ಸನ್ನಿಧಿಯವರೆಗೆ ನಿರ್ಮಿಸಲಾಗಿದ್ದ ಶ್ರೀಕೃಷ್ಣನ ಬಾಲಲೀಲೋತ್ಸವ ಪ್ರತೀಕವಾದ ಮೊಸರು ಕುಡಿಕೆಗಳನ್ನು ಯುವಕರು ಪಿರಮಿಡ್ ರಚಿಸಿ ಒಡೆಯುವ ಸನ್ನಿವೇಶವನ್ನು ನಡೆಸುವ ಮೂಲಕ ಸಂಭ್ರಮಿಸಿದರು.

ಚೆಂಡೆ ಕುಣಿತದೊಂದಿಗೆ ಕೈಕುಂಜದಿಂದ ಬಿ.ಸಿ.ರೋಡ್ ವರೆಗೆ ವೈಭವದ ಶೋಭಾಯಾತ್ರೆಗೆ ನೂರಾರು ಮಂದಿ ಸಾಕ್ಷಿಯಾದರು. ಕೃಷ್ಣಾಷ್ಟಮಿ ಅಂಗವಾಗಿ ರಂಗೋಲಿ ಸ್ಪರ್ಧೆ, ಸಂಗೀತ ಸ್ಪರ್ಧೆ, ಶ್ರೀಕೃಷ್ಣ ಚಿತ್ರ ಬಿಡಿಸುವ ಸ್ಪರ್ಧೆ, ಪುಟಾಣಿಗಳಿಗೆ ಕೃಷ್ಣ ವೇಷ ಸ್ಪರ್ಧೆ, ತೆಂಗಿನ ಕಾಯಿ ಒಡೆಯುವ ಸ್ಪರ್ಧೆ, ಅಡಿಕೆ ಮರ ಹತ್ತುವ ಸ್ಪರ್ಧೆಗಳು ಹಾಗೂ ಭಕ್ತಿಗಾನ ವೈಭವ, ಸಂಗೀತ ಗಾನಸುಧೆ ಮತ್ತು ನಾಟಕ ಪ್ರದರ್ಶನ ಸಹಿತ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶ್ರೀ ರಕೇಶ್ವರಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ಮೋಹನ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಭಂಡಾರಿ, ಶ್ರೀ ರಕೇಶ್ವರಿ ಕ್ರಿಕೆಟರ್ಸ್ ಅಧ್ಯಕ್ಷ ಕಿರಣ್ ಸಹಿತ ಸಹಿತ ಸೇವಾ ಸಮಿತಿ ಹಾಗೂ ಗಣೇಶೋತ್ಸವ ಸಮಿತಿ, ಶ್ರೀ ರಕೇಶ್ವರಿ ಕ್ರಿಕೆಟರ್ಸ್ ಸಮಿತಿ, ಮೊಸರುಕುಡಿಕೆ ಸಮಿತಿಯ ನಾನಾ ಪದಾಧಿಕಾರಿಗಳು ಭಕ್ತರು ಹಾಜರಿದ್ದರು.
