ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತೆನೆ ಹಬ್ಬ( ಹೊಸ ಅಕ್ಕಿ ಊಟ)ಪುದ್ದರ್ ಆಚರಣೆಯು ಆ.30ರಂದು ಭಾನುವಾರ ನಡೆಯಿತು.

ಪ್ರತಿ ವರ್ಷದಂತೆ ಶ್ರೀ ಕ್ಷೇತ್ರದಲ್ಲಿ ತೆನೆಹಬ್ಬ ಕುರಲ್‌ ಪರ್ಬ ಆಚರಣೆಯನ್ನು ವಿಜೃಂಭಣೆಯಿಂದ ನಡೆಸಲಾಗುವುದು.
ತೆನೆಯನ್ನು ಅಖಿಲೇಶ್ವರ ದೇವಸ್ಥಾನದ ಹತ್ತಿರದ ಭಾಸ್ಕರ  ಸಪಲಿಗರ ಗದ್ದೆಯಲ್ಲಿ ಭತ್ತದ  ಬೆಳೆಯನ್ನು  ಬೆಳೆದು ಪೊಳಲಿಯ ಪುದ್ದರ್‌ ಹೊಸ ಅಕ್ಕಿ ಊಟಕ್ಕೆ ತಯಾರು ಮಾಡಲಾಗುತ್ತದೆ. ಪುರಲ್ದ ಕುರಲ್‌ ಎಂದೇ  ಪ್ರತೀತಿ ಇದೆ. ದೇವಸ್ಥಾನದ ಹೋರಾಂಗಣದಲ್ಲಿ ಇದ್ದ  ತೆನೆಯನ್ನು  ಪದಾರ್ಥಿಗಳು   ಧ್ವಜಸ್ತಂಬದ ಮುಂಭಾಗದಲ್ಲಿ ತಂದಿಡುತ್ತಾರೆ.  ಅರ್ಚಕರು  ನೇತೃತ್ವದಲ್ಲಿ ಪ್ರಾರ್ಥನೆ ಮಾಡಿ  ತೆನೆಯನ್ನು ವಾದ್ಯಗೋಷ್ಠಿಯೊಂದಿಗೆ ದೇವಾಲಯದ ಒಳಗೆ ತೆಗೆದುಕೊಂಡು ಹೋಗಿ ತಾಯಿ ಶ್ರೀ ರಾಜರಾಜೇಶ್ವರಿ ಮುಂದೆ ಇಟ್ಟು ವಿಶೇಷ ಪೂಜೆಗಳು

ನಡೆದು ನಂತರ ದೇವಿಯಲ್ಲಿ ಪ್ರಾರ್ಥಿಸಿ ಇಡಿ ಊರಿಗೆ ಒಳ್ಳೆಯದನ್ನು ಮಾಡಿ, ಸುಖ ಸಂತೋಷವನ್ನು ನೀಡಿ. ಮಳೆ ಬೆಳೆ ಒಳ್ಳೆಯ ರೀತಿಯಲ್ಲಿ ಆಗಲಿ ಎಂದು ಪ್ರಾರ್ಥನೆ ಮಾಡಲಾಗುತ್ತದೆ. ಶ್ರೀ ಕ್ಷೇತ್ರಕ್ಕೆ ಸಂಭಂದಪಟ್ಟ ಭಕ್ತಾಧಿಗಳು ತೆನೆ ಹಬ್ಬದಲ್ಲಿ ಪಾಲ್ಗೊಂಡು ದೇವರ ಪ್ರಸಾದವೆಂಬಂತೆ ತೆನೆಗಳನ್ನು ಅಲ್ಲದೇ ದೇವರಿಗೆ ಮಾಡಿದ ನೈವೇದ್ಯವನ್ನು ಸಾವಿರ ಸೀಮೆಯ ಭಕ್ತಾಧಿಗಳು ಮನೆಮನೆಗೆ ಕೊಂಡು ಮನೆಯಲ್ಲಿ ಪುದ್ದರ್​​​ ಆಚರಣೆ ಮಾಡಲಾಗುತ್ತದೆ

 

 ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್‌ ತಂತ್ರಿ, ಪ್ರಧಾನ  ಅನುವಂಶಿಕ ಮೊಕ್ತೇಸರ  ಮಾಧವ ಭಟ್ ಪೊಳಲಿ, ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ದೇವಾಲಯದ ಪ್ರಧಾನ ಅರ್ಚಕರಾದ   ರಾಮ್​​​ ಭಟ್​​, ​ಪರಮೇಶ್ವರ ಭಟ್, ಅನಂತ ಭಟ್‌, ಪದ್ಮನಾಭ ಭಟ್‌ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್‌  ಹಾಗೂ ಕ್ಷೇತ್ರದ ಭಕ್ತಾಧಿಗಳು  ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.

By Suddi9

Leave a Reply

Your email address will not be published. Required fields are marked *