ಬಂಟ್ವಾಳ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 11ನೇ ಜನ್ಮದಿನಾಚರಣೆ ಗುರುವಾರ ಬಂಟ್ವಾಳ ತಾ.ಪಂ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ತಾಲೂಕು ಆಡಳಿತ ಆಶ್ರಯದಲ್ಲಿ ನಡೆಯಿತುತಹಶೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರಸು ಅವರ ತತ್ವಾದರ್ಶಗಳ ಪಾಲನೆಗೆ ಕರೆ ನೀಡಿದರು.

ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಅವರು ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಡವರು ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೆ ಉಳುವವನೇ ಹೊಲದೊಡೆಯ ಎಂಬ ತತ್ವದಡಿ ಭೂಮಿ ದೊರಕಿಸಲು ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಿದವರು ದೇವರಾಜ ಅರಸರು ಎಂದರು.

ಕಾಲೇಜು ಉಪನ್ಯಾಸಕಿ ಡಾ. ಪುಟ್ಟಲಕ್ಷ್ಮಮ್ಮ ವಿಶೇಷ ಉಪನ್ಯಾಸ ನೀಡಿ, ಭೂಮಿ ಹಕ್ಕು ಕಳೆದುಕೊಂಡವರಿಗೆ
ಪರಿಹಾರ ಸಹಿತ ಹಲವು ಸುಧಾರಣೆಗಳನ್ನುಭೂಸುಧಾರಣೆ ಕಾಯ್ದೆ ಮೂಲಕ ಜಾರಿಗೆ ತಂದರು.
ಜೀತಪದ್ಧತಿ ನಿರ್ಮೂಲನೆ ಮಾಡುವ ಮೂಲಕ ರಕ್ತರಹಿತ ಕ್ರಾಂತಿ ಮಾಡಿದ್ದಾರೆ. ಮಂಗಳೂರು ಹಾಸನ ರೈಲ್ವೆ ಸಂಚಾರ ಅರಸು ಅವರ ಕಾಲದಲ್ಲಿ ಆಗಿತ್ತು. ವೃದ್ಧಾಪ್ಯ ವೇತನ, ಪಿಂಚಣಿ ಸಹಿತ ಹಲವು ಕಲ್ಯಾಣ ಕಾರ್ಯಕ್ರಮ ಜಾರಿಗೆ ತಂದ ಅರಸರು ಕತ್ತಲಲ್ಲಿ ಬೆಳಕು ತಂದವರು ಎಂದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ, ಅರಸು ಅವರ ಕುರಿತು ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶೇಷಗಿರಿ ನಾಯಕ್ ಸ್ವಾಗತಿಸಿದರು.
