ಬಂಟ್ವಾಳ: ಹೈನುಗಾರರ ಅನುಕೂಲಕ್ಕಾಗಿದ.ಕ.ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಲವಾರು ಯೋಜನೆಗಳನ್ನು ಪರಿಚಯಿಸಲಾಗಿದ್ದು, ಕರು ಹುಟ್ಟುವಲ್ಲಿಂದ ಸಾಯುವವರೆಗೂ ಯೋಜನೆಗಳಿವೆಯಲ್ಲದೆ ವಿವಿಧ ರೀತಿಯ ಸಹಾಯಧನವನ್ನು ನೀಡಲಾಗುತ್ತಿದ್ದು, ಹೈನುಗಾರರು ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು, ಇಷ್ಟಪಟ್ಟು ,ಕಷ್ಟಪಟ್ಟು ಕೆಲಸ ಮಾಡಿದರೆ ಹೈನುಗಾರಿಕೆಯಲ್ಲಿ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ ಎಂದು ದ.ಕ. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಹೇಳಿದ್ದಾರೆ.

ಗುರುವಾರ ಫರ್ಲಾ ವೆಲಂಕಣಿ ಚರ್ಚ್ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕಿನ ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘ (ನಿ.)ದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆಯಿಂದ ಸಾಕಷ್ಟ ಪ್ರಯೋಜನಗಳಿದ್ದು, ಚಿನ್ನಕ್ಕಿಂತ ಅನ್ನ ಶ್ರೇಷ್ಟವಾಗಿದ್ದು,ಅನ್ನಕ್ಕಿಂತ ಮಣ್ಣು ಶ್ರೇಷ್ಠವಾಗಿದೆ ಈನಿಟ್ಟಿನಲ್ಲಿ ಮಣ್ಣಿನ ಫಲವತ್ತತೆ ಉಳಿಸಲು ಹೈನುಗಾರಿಕೆಯಿಂದ ಸಾಧ್ಯವಾಗುತ್ತದೆ ಎಂದ ಅವರು ಹಸುಗಳನ್ನು ಹೆಚ್ಚು ಹೆಚ್ಚು ಸಾಕಿದಾಗ ಮಾನಸಿಕ ನೆಮ್ಮದಿಯು ಸಿಗುತ್ತದೆ ಎಂದರು.
ಹೈನುಗಾರರಿಂದ ಪಡೆದ ಹಾಲಿನಿಂದ ಬರುವ ಲಾಭಾಂಶವನ್ನು ಮತ್ತೆ ಹೈನುಗಾರರಿಗೆ ನೀಡುವ ಪರಿಕಲ್ಪನೆ ಕೇವಲ ಹಾಲು ಒಕ್ಕೂಟದಲ್ಲಿ ಮಾತ್ರ ಇದೆ. ಖಾಸಗಿ ವ್ಯವಸ್ಥೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ ಎಂದ ರವಿರಾಜ ಹೆಗ್ಡೆ ಅವರು ನಾವೂರು ಹಾ.ಉ.ಒಕ್ಕೂಟ ಪ್ರಸ್ತುತ ಸಾಲಿನಲ್ಲಿ ಮೂರು ಲಕ್ಷಕ್ಕು ಅಧಿಕ ಲಾಭಗಳಿಸಿ , ಸದಸ್ಯರಿಗೆ ಲೀ.ಗೆ 1.05 ರೂ. ಬೋನಸ್ ಘೋಷಿಸಿದಲ್ಲದೆ ಡಿವಿಡೆಂಟ್ ಕೂಡ ನೀಡುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಮಂಗಳೂರು ದ.ಕ. ಹಾಲು ಒಕ್ಕೂಟದನಿರ್ದೇಶಕರುಗಳಾದ ಕೆ. ಪಿ. ಸುಚರಿತ ಶೆಟ್ಟಿ , ಸವಿತಾ ಎನ್. ಶೆಟ್ಟಿ,ನಂದರಾಮ್ ರೈ,ಫರ್ಲಾ ವೆಲಂಕಣಿ ಚರ್ಚ್ ಧರ್ಮಗುರುಗಳಾದ ಮಾರ್ಕ್ ಅರುಣ್ ಡಿ’ಸೋಜಾ ಅವರು ಮಾತನಾಡಿ ಶುಭಹಾರೈಸಿದರು.
ನಾವೂರು ಹಾ.ಉ.ಸ. ಸಂಘದ ಅಧ್ಯಕ್ಷರಾದ ಸದಾನಂದ ಗೌಡ ನಾವೂರು ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ರೈತರು ಸ್ವಾಭಿಮಾನಿಗಳಾಗಿದ್ದು, ಯಾರ ಹಂಗಿನಲ್ಲು ಇಲ್ಲ,ನಮ್ಮ ಸಂಘವು ಅಭಿವೃದ್ದಿ ಯಾಗುವಲ್ಲಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರಲ್ಲದೆ ಮುಂದಿನ ದಿನದಲ್ಲು ಸಂಘದ ಬೆಳವಣಿಗೆಯಲ್ಲಿ ಎಲ್ಲರ ಸಹಕಾರ ಯಾಚಿಸಿದರು.
ಮಂಗಳೂರು ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕರಾದ (ಶೇ.ತಾಂ.) ಡಾ| ರವಿರಾಜ್ಉಡುಪ, ಉಪವ್ಯವಸ್ಥಾಪಕರಾದ ಜಾನೆಟ್ ರೊಸಾರಿಯೋ,ವಿಸ್ತರಣಾಧಿಕಾರಿ ಪ್ರಫುಲ್ಲಾ,ಪಶುವೈದ್ಯಾಧಿಕಾರಿ ಡಾ. ಚರಣ್ ,ಸಂಘದ ಉಪಾಧ್ಯಕ್ಷ ಸುರೇಶ್ ಯು.ಕೆ.,ಉಪಸ್ಥಿತರಿದ್ದರು.
ಇದೇ ವೇಳೆ ಸಂಘದ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು,ಅತೀಹೆಚ್ಚು ಹಾಲು ಪೂರೈಸಿದ ಹೈನುಗಾರ ಸದಸ್ಯರನ್ನು ಸನ್ಮಾನಿಸಲಾಯಿತು ಹಾಗೂ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.
ಇದಕ್ಕು ಮೊದಲು ಸಂಘದ ವಾರ್ಷಿಕ ಮಹಾಸಭೆಯು ನಡೆಯಿತು.ನಿರ್ದೇಶಕರಾದ ಕೊರಗಪ್ಪ ಮೂಲ್ಯ ವಿಶ್ವನಾಥ ಎ., ಕಿಶೋರ್ ರೋಡ್ರಿಗಸ್, ಜೋಯ್ ವಾಲ್ಟರ್ ಡಿ’ಸೋಜಾ,ರಮೇಶ್ ನಾಯ್ಕ್, ಬಾಲಕೃಷ್ಣ ಗೌಡ, ರೂಪಾಶ್ರೀ ಅವರು ಹಾಜರಿದ್ದರು.
ಸಂಘದ ಕಾರ್ಯನಿರ್ವಹಣಾಧಿಕಾರಿ ಉಷಾ ಅವರು ವರದಿ ವಾಚಿಸಿದರು.
ನಿರ್ದೇಶಕರಾದ ಸ್ಟೀವನ್ ಕ್ಯಾಸ್ಟಲಿನೊ ಸ್ವಾಗತಿಸಿದರು. ಐರಿನ್ ಡಿಸೋಜ ವಂದಿಸಿದರು.ಉಮಾಶಂಕರ್ ಕಾರ್ಯಕ್ರಮ ನಿರ್ವಹಿಸಿದರು.
