ಬಂಟ್ವಾಳ: ಮಂಗಳೂರಿನ ಇನೋಳಿಯ ಬಿಯರೀಸ್ ಇನ್‌ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ  ಮಾರ್ಕಮೆ ಗ್ರಾಮದಲ್ಲಿ ಭತ್ತದ ಗದ್ದೆ ಭೇಟಿ ಹಾಗೂ ನೇಜಿ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಮಿಯಾಜ್ ಹಾಗೂ ಸಹಾಯಕ ಕಾರ್ಯಕ್ರಮಾಧಿಕಾರಿ ಸಹಾಧಾ ವಿದ್ಯಾರ್ಥಿಗಳಿಗೆ  ಕೃಷಿ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಉಪನ್ಯಾಸಕರಾದ ಶಮೀಮಾ, ಜಕಿಯಾ, ಫರಾ, ಅರ್ಪಿತಾ, ಪ್ರಿಯಾ ಹಾಗೂ ಹೇಮಾವತಿ ಅವರು ಸಹಕಾರ ನೀಡಿದರು.

ಸ್ಥಳೀಯ ರೈತರ ಮಾರ್ಗದರ್ಶನದಲ್ಲಿ ಸ್ವಯಂಸೇವಕರು ನೇಜಿ ನೆಡುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಗ್ರಾಮೀಣ ಜೀವನ, ಭತ್ತದ ಕೃಷಿಯ ಸಾಂಪ್ರದಾಯಿಕ ವಿಧಾನಗಳು ಹಾಗೂ ರೈತರ ಪರಿಶ್ರಮ, ಸಮರ್ಪಣೆ ಮತ್ತು ಸಹನಶೀಲತೆಯನ್ನು ನೇರವಾಗಿ ಅರಿಯುವ ಅವಕಾಶ ವಿದ್ಯಾರ್ಥಿಗಳಿಗೆ ದೊರೆಯಿತು.

ಕಾರ್ಯಕ್ರಮದಲ್ಲಿ ಬಿಸಿಎ, ಬಿ.ಕಾಂ ಹಾಗೂ ಬಿಬಿಎ ವಿಭಾಗಗಳ 50ಕ್ಕೂ ಅಧಿಕ ಎನ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸಿದರು.

By Suddi9

Leave a Reply

Your email address will not be published. Required fields are marked *