ಬಂಟ್ವಾಳ: ಆತ್ಮ ಯೋಜನೆಯಡಿ ಪ್ರತಿ ಎರಡು ವರ್ಷಗಳಿಗೊಮ್ಮೆ ಹೊಸ ರೈತ ಸಲಹಾ ಸಮಿತಿಯನ್ನು ರಚಿಸಲಾಗುತ್ತಿದ್ದು, ಸಮಿತಿಯ ಸದಸ್ಯರ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ  ನಡೆಸಲಾಗುತ್ತಿದೆ. ಸಮಿತಿಯ ಮೂಲಕ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಿ ಇಲಾಖೆಯ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜೊತೆಗೆ ರೈತರ ಅವಶ್ಯಕತೆಗಳಿಗನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶವನ್ನು ಹೊಂದಿರುತ್ತದೆ ಎಂದು‌ ಬಂಟ್ವಾಳ ಕೃಷಿ ಇಲಾಖೆಉ ಸಹಾಯಕ ಕೃಷಿ ನಿರ್ದೇಶಕರಾದ  ವೀಣಾ ಕೆ. ಆರ್. ಹೇಳಿದ್ದಾರೆ.
ಬಂಟ್ಚಾಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಲೂಕು ಮಟ್ಟದ ರೈತ ಸಲಹಾ ಸಮಿತಿಯ ಮೊದಲಸಭೆಯ
ಅಧ್ಯಕ್ಷತೆ ವಹಿಸಿ ಮಾನಾಡಿ,
ಆತ್ಮ ಯೋಜನೆಯಡಿ ಹಮ್ಮಿಕೊಳ್ಳಲಾಗುವ ಪ್ರಾತ್ಯಕ್ಷಿಕೆ, ಅಧ್ಯಯನ ಪ್ರವಾಸ, ತರಬೇತಿ ಹಾಗೂ ಇತರೆ ವಿಸ್ತರಣಾ ಕಾರ್ಯಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.
ಇದೇ ವೇಳೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ  ಜೋ ಪ್ರದೀಪ್ ಡಿಸೋಜ, ಪಶುಸಂಗೋಪನಾ ಇಲಾಖೆಯ ಪಶುವೈದ್ಯಾಧಿಕಾರಿಗಳಾದ ಡಾ. ಉಮೇಶ್, ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಹರೀಶ್ ಶೆಣೈ, ಬಂಟ್ವಾಳ ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ ಪಿ. ಅವರು
ವಿವಿಧ ಯೋಜನೆ, ಸಹಾಯಧನ ಹಾಗೂ ರೈತರಿಗೆ ಲಭ್ಯವಿರುವ ಸೌಲಭ್ಯಗಳು, ಕೃಷಿ ಸಖಿಯರಿಗೆ ಲಭ್ಯವಿರುವ ತರಬೇತಿ ಕಾರ್ಯಕ್ರಮಗಳು, ರೈತರಿಗೆ ಲಭ್ಯವಿರುವ ಭತ್ತದ ಸುಧಾರಿತ ಬೀಜಗಳು, ಸಾವಯವ ಗೊಬ್ಬರಗಳ ಬಳಕೆ, ಬೀಜೋಪಚಾರದ ಮಹತ್ವ ಹಾಗೂ ಉತ್ತಮ ಇಳುವರಿ ಪಡೆಯಲು ಅನುಸರಿಸಬೇಕಾದ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.
 

ಅದೇರೀತಿ ಆತ್ಮ ಯೋಜನೆಯಡಿ ಲಭ್ಯವಿರುವ ರೈತ ತರಬೇತಿ, ರೈತರ ಅಧ್ಯಯನ ಪ್ರವಾಸ, ರೈತ ಗುಂಪುಗಳ ರಚನೆ, ವಿವಿಧ ಪ್ರಶಸ್ತಿಗಳು ಹಾಗೂ ಇತರೆ ವಿಸ್ತರಣಾ ಚಟುವಟಿಕೆಗಳ ಕುರಿತು ಸಭೆಗೆ ವಿವರಿಸಲಾಯಿತು.
ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕರು, ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಮತ್ತು ರೈತ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.  

ಆಯ್ಜೆ  
ಈ ಸಂದರ್ಭ 2026-27 ಸಾಲಿಗೆ ನೂತನ ತಾಲೂಕು ಮಟ್ಟದ ರೈತ ಸಲಹಾ ಸಮಿತಿಗೆ
ಅಬೂಬಕ್ಕರ್ ಅಮ್ಮುಂಜೆ ಅವರನ್ನು‌
ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ಕುಮಾರಿ ಸ್ನೇಹಾ ಅವರು ಸ್ವಾಗತಿಸಿ,ವಂದಿಸಿದರು.

By Suddi9

Leave a Reply

Your email address will not be published. Required fields are marked *