ರೆಡಿಮಿಕ್ಸ್ ಸಾಗಾಟದ ಲಾರಿ | ಓರ್ವಗೆ ಗಾಯ

ಗುರುಪುರ : ರಾಷ್ಟ್ರೀಯ ಹೆದ್ದಾರಿ ೧೬೯ರ ಗುರುಪುರ ಜಂಕ್ಷನ್‌ನಿAದ ಅನತಿ ದೂರದಲ್ಲಿರುವ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಎದುರುಗಡೆ ಜು. ೨೧ರಂದು ಮಧ್ಯಾಹ್ನ ೧೨:೩೦ರ ಸುಮಾರಿಗೆ ಜಲ್ಲಿ ರೆಡಿಮಿಕ್ಸ್ ಸಾಗಾಟದ ಲಾರಿಯೊಂದು ರಸ್ತೆಯಿಂದ ಕೆಳಕ್ಕುರುಳಿದ ಬಿದ್ದ ಘಟನೆ ಸಂಭವಿಸಿದೆ.

ಲಾರಿಯಲ್ಲಿ ಗುರುಪುರ ಕೈಕಂಬದಿಂದ ಮಂಗಳೂರಿನತ್ತ ಸಾಗಾಟದ ಜಲ್ಲಿ ರೆಡಿಮಿಕ್ಸ್ ತುಂಬಿತ್ತು. ಇಳಿಜಾರಾದ ಪ್ರದೇಶದಲ್ಲಿ ಹೆದ್ದಾರಿ ಬದಿಗೆ ಸರಿದ ೧೨ ಚಕ್ರದ ಈ ಘನ ವಾಹನ, ರಸ್ತೆಯಿಂದ ಕೆಳಕ್ಕುರುಳಿದೆ. ಲಾರಿಯಿಂದ ಇಳಿಯಲು ಪ್ರಯತ್ನಿಸಿದ ಕ್ಲೀನರ್‌ನ ಕಾಲಿಗೆ ಗಾಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ವೇಳೆ ರಸ್ತೆ ಬದಿಯ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು, ತಕ್ಷಣದಿಂದ ಗುರುಪುರ ಆಸುಪಾಸಿನಲ್ಲಿ ಒಂದು ತಾಸು ವಿದ್ಯುತ್ ಸ್ಥಗಿತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಗುತ್ತಿಗೆ ಸಂಸ್ಥೆಯ ಉಪ ಗುತ್ತಿಗೆ ಸಂಸ್ಥೆಯಾಗಿ ಕೆಲಸ ಮಾಡುತ್ತಿರುವ ಪಾಂಡುರಂಗ ಕನ್‌ಸ್ಟçಕ್ಷನ್‌ನ ಲಾರಿ ಇದೆಂದು ಹೇಳಲಾಗಿದೆ.

By Suddi9

Leave a Reply

Your email address will not be published. Required fields are marked *