ಬಂಟ್ವಾಳ:ರಾ.ಹೆ.ಯ ಮೆಲ್ಕಾರಿನಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರಕ್ಕೆ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಮಂದಿರದ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರಿಗೆ ಮಂದಿರದ ವತಿಯಿಂದ ವಿಜ್ಙಾಪನಾ ಪತ್ರವನ್ನು ಹಸ್ತಾಂತರಿಲಾಯಿತು.ಈ ಸಂದರ್ಭ ಮಾತನಾಡಿದ ಅವರು ತಮ್ಮ ಶಾಸಕರ ನಿಧಿಯಿಂದ ಮಂದಿರದ ಜೀರ್ಣೋದ್ದಾರ ಕಾರ್ಯಕ್ಕೆ  ಅನುಧಾನವನ್ನು ಒದಗಿಸಿಕೊಡುವ  ಭರವಸೆ ನೀಡಿದರು.
ಈ ಸಂದರ್ಭ ಮಂದಿರದ ಸಮಿತಿ ಅಧ್ಯಕ್ಷರಾದ ಸಚಿನ್ ಮೆಲ್ಕಾರ್,ಗೌರವಧ್ಯಕ್ಷರಾದ ದಾಮೋದರ ಮೆಲ್ಕಾರ್, ಎಂ.ಎನ್ ಕುಮಾರ್ ,ಕಾರ್ಯದರ್ಶಿ ದಿನೇಶ್ ಟೈಲರ್,ಸಮಿತಿಯ ಸದಸ್ಯರಾದ ಶಂಕರ ಆಚಾರ್ಯ,ಸತೀಶ.ಪಿ.ಸಾಲಿಯಾನ್,ವಿಠ್ಠಲಶೆಣೈ,ವಿಠ್ಠಲ ಆಚಾರ್ಯ,ರತನ್,ಸಂದೇಶ್,ಶೋಧನ್,ಸಚಿನ್‌ರೈ,ಕೇಶವ ಟೈಲರ್,ಪ್ರವೀಣ್,ಸಚಿನ್,ನಿತಿನ್, ಜ್ಞಾನೇಶ್ವರ ಪ್ರಭು ಮುಂತಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *