ಪರೀಕ್ಷಿತ್ ಕಾವಗೆ ಶೇ. ೯೮.೩೩
ಗುರುಪುರ : ಇಲ್ಲಿನ ಬೆಳ್ಳಿಬೆಟ್ಟುಗುತ್ತು ರಘುರಾಮ ಕಾವ ಮತ್ತು ರಮಣಿ ಕಾವ ದಂಪತಿ ಪುತ್ರ ಪರೀಕ್ಷಿತ್ ಕಾವ ಯಾನೆ `ಮುನ್ನ’ ಅವರು ಮೂಡಬಿದ್ರೆಯ ಆಳ್ವಾಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಒಟ್ಟು ೫೯೦ ಅಂಕ(ಶೇ. ೯೮.೩೩) ಗಳಿಸಿ, ಡಿಸ್ಟಿಂಕ್ಶನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಅಭಿನಂದಿಸಿದೆ. ಇವರು ಮುಂದೆ ಚಾಟರ‍್ಡ್ ಅಕೌಂಟೆAಟ್(ಸಿಎ) ವ್ಯಾಸಂಗ ಮಾಡಲು ನಿರ್ಧರಿಸಿದ್ದಾರೆ.
