ದೇವರ ಆರಾಧನೆಯೊಂದಿಗೆ ಕಂಬಳ : ಶ್ರೀ ಅನಂತ ಪದ್ಮನಾಭ ಆಸ್ರಣ್ಣ

ಗುರುಪುರ : ಕಂಬಳವು ಜಾನಪದ ಕ್ರೀಡೆಯಾಗಿದ್ದರೂ, ಸಮಾಜದ ಏಳಿಗೆ ಬಯಸಿ ದೇವರ ಆರಾಧನೆಯೊಂದಿಗೆ ನಡೆಯುವ ಆಚರಣೆ. ಇಲ್ಲಿ ಪರಸ್ಪರ ಬಾಂಧವ್ಯವಿದೆ. ಗುರುಪುರ ಕಂಬಳದಲ್ಲಿ ತುಳುನಾಡು ಮತ್ತು ಭಾರತೀಯ ಪರಂಪರೆ ಎದ್ದು ಕಾಣುತ್ತಿದೆ. ಕಂಬಳ ಯಶಸ್ವಿಗೆ ಶ್ರಮಿಸುತ್ತಿರುವ ಎಲ್ಲರನ್ನೂ ಶ್ರೀ ದೇವಿ ಅನುಗ್ರಹಿಸಲಿ ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.

ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ಮಾಣಿಬೆಟ್ಟುಗುತ್ತು ಗುರುಪುರ ಇಲ್ಲಿ ಎ. ೪ರಂದು ಆಯೋಜಿಸಲಾದ ೩ನೇ ವರ್ಷದ ಹೊನಲು ಬೆಳಕಿನ ಮೂಳೂರು-ಅಡ್ಡೂರು ಜೋಡುಕರೆ `ಗುರುಪುರ ಕಂಬಳ’ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ಗುರುಪುರ ಕಂಬಳವು ವ್ಯವಸ್ಥಿತ, ಸಾಂಪ್ರದಾಯಿಕ ಹಾಗೂ ಅದ್ದೂರಿಯಾಗಿ ನಡೆಯುವಲ್ಲಿ ಇನಾಯತ್ ಅಲಿ ಅವರ ಶ್ರಮವಿದೆ. ತುಳುನಾಡಿನ ಕೂಡುಕಟ್ಟಿಗೆ ಸಾಕ್ಷಿö್ಯಯಾದ ಕಂಬಳ ಕ್ರೀಡೆಯು ಗುರುಪುರದಲ್ಲಿ ಅತಿ ವಿಶಿಷ್ಟ ಹಾಗೂ ಜಾತ್ಯತೀತ ನೆಲೆಯಲ್ಲಿ ನಡೆಯುತ್ತಿದೆ. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡುತ್ತಿದ್ದಾರೆ ಎಂದರು.

ಗುರುಪುರ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮಾತನಾಡಿ, ಕಂಬಳ ಜಾನಪದ ಕ್ರೀಡೆಯಾಗಿದ್ದರೂ ಇದರಲ್ಲಿ ಸಮಾಜಕ್ಕೆ ನೆರವಾಗುವ ವ್ಯವಸ್ಥೆ ಅಡಕವಾಗಿದೆ. ಕಂಬಳದಿAದ ಸುತ್ತಮುತ್ತಲಿನ ಮಂದಿ ಒಗ್ಗೂಡಲು ಸಾಧ್ಯವಿದೆ. ಸಮಾಜದ ಉನ್ನತಿಗಾಗಿ ಇಂತಹ ಕ್ರೀಡೆಗಳು ಇರಬೇಕು ಎಂದರು.

ಕAಬಳ ಸಮಿತಿಯ ಅಧ್ಯಕ್ಷ ಇನಾಯತ್ ಅಲಿ, ಸಮಿತಿ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಯಶವಂತ ಶೆಟ್ಟಿ ಬೆಳ್ಳೂರುಗುತ್ತು, ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ಮಾಣಿಬೆಟ್ಟುಗುತ್ತು, ವ್ಯವಸ್ಥಾಪಕ ವಿನಯಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ಧಾರ್ಮಿಕ ಪರಿಷತ್ ಸದಸ್ಯ ಲಕ್ಷಿö್ಮÃಶ ಗಬಲಡ್ಕ, ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ, ಸಮಿತಿ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ದೋಣಿಂಜೆಗುತ್ತು ಗಡಿಕಾರ ಪ್ರಮೋದ್ ಕುಮಾರ್ ರೈ, ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪಾಂಡುರAಗ ಕಾಮತ್, ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ದೈವಂಗಳಗುಡ್ಡೆ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಸಮಿತಿ ಪದಾಧಿಕಾರಿಗಳಾದ ಹರೀಶ್ ಭಂಡಾರಿ ಗುರುಪುರ, ಪುರುಷೋತ್ತಮ ಮಲ್ಲಿ, ಸುರೇಂದ್ರ ಕಂಬಳಿ, ಗಿರೀಶ್ ಆಳ್ವ, ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು, ಮುಂಬೈ ಸಮಿತಿಯ ಸತೀಶ್ ಚೌಟ, ಸತೀಶ್ ಎಂ. ಶೆಟ್ಟಿ ಕಾರಮೊಗರುಗುತ್ತು, ನಾಸಿರ್ ಲಕ್ಕೀಸ್ಟಾರ್, ಚಂದ್ರಹಾಸ ಅಮೀನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಶಶಿರಾಜ್ ಶೆಟ್ಟಿ ಕೊಳಂಬೆ, ಆರ್. ಕೆ. ಪೃಥ್ವೀರಾಜ್, ಉಮೇಶ್ ರೈ ಪದವು ಮೇಗಿನಮನೆ, ಸುಧೀರ್ ಪಕ್ಕಳ, ಜಯಂತ್ ಅಮೀನ್ ಕೋರೆಟ್ಟು, ಜತ್ತಿ ಪೂಜಾರಿ ಮೂಡುಶೆಡ್ಡೆ, ಚಂದ್ರಹಾಸ ಪೂಜಾರಿ ಕೌಡೂರು, ತನಿಯಪ್ಪ ಪೂಜಾರಿ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು ಮತ್ತು ಸದಸ್ಯರು, ಕಂಬಳಾಭಿಮಾನಿಗಳು, ಊರ ನಾಗರಿಕರು ಇದ್ದರು.

ವಿಜೇತ್ ಶೆಟ್ಟಿ ಮಂಜನಾಡಿ ಮತ್ತು ಮನೋಜ್ ವಾಮಂಜೂರು ನಿರೂಪಿಸಿದರು. ಕಂಬಳ ಸಮಿತಿ ಸ್ಥಾಪಕಾಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಸ್ವಾಗತಿಸಿದರು. ಕಂಬಳದಲ್ಲಿ ಹಾಜರಿದ್ದ ಪ್ರತಿಯೊಂದು ಜೋಡಿ ಕೋಣಗಳಿಗೆ ೩೦ ಕೇಜಿ ಉರುಳಿ ಬ್ಯಾಗ್, ಬೆಳ್ಳಿ ಪದಕ, ಶಾಲುಕೊಟ್ಟು ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *