ಕೊಚ್ಚಿ: `ಕಿಸ್ ಆಫ್ ಲವ್ ಅನೈತಿಕ’ ಚಟುವಟಿಕೆ ಎಂದು ಬಲಪಂಥೀಯವಾದಿಗಳು ವಾದಿಸಿದ  ಬೆನ್ನಲ್ಲೇ ಕೇರಳ ಹೈಕೋರ್ಟ್ ಸಹ ಿದನ್ನು ಅನೈತಿಕ ಚಟುವಟಿಕೆ ಎಂದು ಬಣ್ಣಿಸಿದೆ. . ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ಕಮಲ್ ಪಾಶ ಅವರು ‘ಕಿಸ್ ಆಫ್ ಲವ್ ಅನೈತಿಕವಾದದ್ದು. ಆದರೂ ಇಂತಹ ಘಟನೆಗಳಿಗೆ ರಾಜಕೀಯ ಯುವ ಸಂಘಟಕರ ಪಕ್ಷಗಳು ಸಾತ್ ನೀಡುತ್ತಿರುವುದು ದೇಶದ ದುರದೃಷ್ಟಕರ ಸಂಗತಿ’ ಎಂದು ಹೇಳಿದ್ದಾರೆ.

kiss3

freedom to kiss

 

ಕಿಸ್ ಆಫ್ ಲವ್‌ಗೆ ಆರಂಭದಿಂದಲೂ ವಿರೋಧ ವ್ಯಕ್ತವಾಗಿತ್ತು.  ಕೇರಳದಲ್ಲಿ ನಡೆದ ನೈತಿಕ ಪೊಲೀಸ್ ಗಿರಿಯ ವಿರುದ್ಧ ಸಿಡಿದೆದ್ದ ಯುವಸಮುದಾಯವೊಂದು ಫೇಸ್ಬುಕ್ ನಲ್ಲಿ ಇದರ ಬಗ್ಗೆ ಪೇಜ್ ಸೃಷ್ಟಿಸಿ ಅಭಿಯಾನ ಆರಂಭಿಸಿತ್ತು. ಇದರಂತೆ ಕೇರಳದ ಕೋಝಿಕ್ಕೋಡ್‌ನ ಮೊಫಿಸಿಸ್ ಬಸ್ ನಿಲ್ದಾಣದಲ್ಲಿ ‘ಕಿಸ್ ಇನ್ ದಿ ಸ್ಟ್ರೀಟ್‌’ ಎಂಬ ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದ್ದ ಹನುಮಾನ್ ಸೇನಾ ಕಾರ್ಯಕರ್ತರು ಹಾಗೂ ಯುವ ಮೊರ್ಚಾ ಕಾರ್ಯಕರ್ತರು ಪ್ರತಿಭಟನೆ ವೇಳೆ ಹಲ್ಲೆ ಮಾಡಿದ್ದರು.

ಈ ಘಟನೆ ಹಿಂಸೆಗೆ ತಿರುಗುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಲಾಟಿ ಚಾರ್ಜ್ ಮಾಡಿದ್ದರು. ಅಲ್ಲದೆ, ಭಾರತೀಯ ಜನತಾ ಪಕ್ಷದ ಐವರು ಕಾರ್ಯಕರ್ತರನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಬಂಧಿತರಾಗಿದ್ದ 5 ಮಂದಿಯ ಜಾಮೀನು ಅರ್ಜಿ ಕುರಿತಂತೆ ನಿನ್ನೆ ಕೇರಳ ಹೈ ಕೋರ್ಟ್ ನ್ಯಾಯಧೀಶ ಬಿ.ಕಮಲ್ ಪಾಷ ನೇತೃತ್ವದಲ್ಲಿ ವಿಚಾರಣೆ ಆರಂಭಗೊಂಡಿತ್ತು.

By Suddi9

Leave a Reply

Your email address will not be published. Required fields are marked *