ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳ ವತಿಯಿಂದ 2021-26 ನೇ ಸಾಲಿನ ಸದಸ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷಾ ಅವರು ಮಾತನಾಡಿ, ಪಂಚಾಯತ್ ಗೆ ಬಂದಂತಹ ಅನುದಾನಗಳನ್ನು ಸದಸ್ಯರು ತಮ್ಮ ವಾರ್ಡ್ ಗಳ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಸದಾ ಕ್ರಿಯಾಶೀಲರಾಗಿ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದ ಅವರು ಸರ್ವ ಸದಸ್ಯರ ಸಹಕಾರವನ್ನು ಸ್ಮರಿಸಿದರು.

ಗೌರವಾರ್ಪಣೆ ಸ್ವೀಕರಿಸಿದ ಪಂಚಾಯತ್ ಅಧ್ಯಕ್ಷೆ ಸಮಿತಾ ಡಿ ಪೂಜಾರಿ, ಉಪಾಧ್ಯಕ್ಷ ಸಚ್ಚಿದಾನಂದ ಪೂಜಾರಿ, ಸದಸ್ಯರಾದ ಅಬ್ದುಲ್ ಲತೀಫ್, ಶ್ರೀಧರ ರೈ, ಅಶೋಕ್ ರೈ ಅವರುಬತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಸದಸ್ಯರಾದ ಧನುಂಜಯ ಗೌಡ, ಪ್ರೇಮಾ, ಲಕ್ಷ್ಮೀ, ಶಕೀಲಾ ಕೆ.ಪೂಜಾರಿ, ಶಾಲಿನಿ, ಸುಜಾತಾ ಗೌರವ ಅಭಿನಂದನೆ ಸ್ವೀಕರಿಸಿದರು.

ಇದೇ ವೇಳೆ ಗ್ರಾಮ ಪಂಚಾಯತ್ ನ ಶೇಕಡಾ 25 ಮತ್ತು ಶೇಕಡಾ 5 ರ ಫಲಾನುಭವಿಗಳಿಗೆ ಪಂಚಾಯತ್ ಅಧ್ಯಕ್ಷೆ  ಸಮಿತಾ ಡಿ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸೋಲಾರ್ ಲೈಟ್ ಹಾಗೂ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು.

ಸಿಬ್ಬಂದಿಗಳಾದ ದೀಪ್ತಿ ಸ್ವಾಗತಿಸಿ, ಸೌಮ್ಯ ವಂದಿಸಿದರು. ಶಶಿಧರ ಹಾಗೂ ಉಪೇಂದ್ರ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *