ಬಂಟ್ವಾಳ: ಕ್ರೀಡೆಯಲ್ಲಿ ಗೆಲುವು ಸಾಧಿಸಬೇಕಾದರೆ ನಿತ್ಯ ಅಭ್ಯಾಸವನ್ನು ಮಾಡಬೇಕಾಗುತ್ತದೆ. ಅದೇ ರೀತಿ ವಕೀಲ ವೃತ್ತಿಯಲ್ಲು ಕೂಡ ಅದೇ ರೀತಿಯ ಅಭ್ಯಾಸಿಸುವ ಅಗತ್ಯವಿದೆ ಎಂದು ಹೈಕೋಟ್೯ನ ಹಿರಿಯ ವಕೀಲರಾಗಿರುವ ಪದ್ಮಪ್ರಸಾದ್ ಹೆಗ್ಡೆ ಅವರು ಹೇಳಿದ್ದಾರೆ.
ಶನಿವಾರ ಬಂಟ್ವಾಳ ವಕೀಲರ ಸಂಘದ ಆಶ್ರಯದಲ್ಲಿ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲಾ ಮೈದಾನದಲ್ಲಿ ನಡೆ್
ವಾರ್ಷಿಕ ಕ್ರೀಡಾಕೂಟ – 2026 ನ್ನು ಉದ್ಘಾಟಿಸಿ ಅವರು ಮಾತನಾಡಿದರು

ವಕೀಲರು ತಮ್ಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕ್ರೀಡೆ ಅಥವಾ ಯೋಗವನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ ಎಂದ ಅವರು-ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ವಕೀಲರಲ್ಲಿರಬೇಕು ಎಂದರು.
ಬಂಟ್ವಾಳ ವಕೀಲರ ಸಂಘದ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಿಚಾರ್ಡ್ ಕೊಸ್ತಾ ಎಂ. ಕಾರ್ಯಕ್ರಮದ ಅಧ್ಯಕ್ಚತೆ ವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ
ಕೆ.ಎಸ್.ಪಿ.ಸಿ.ಅಭ್ಯರ್ಥಿಗಳು,ವಕೀಲ ಶ್ರೀನಿವಾಸ್ ಟಿ., ಶುಭಾಸ್ ಕೌಡಿಚ್ಚಾರ್ ಮತ್ತು ಶಿವಕುಮಾರ್ ಎನ್ ಭಾಗವಹಿಸಿದರು. ಮಂಗಳೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷ ವಿಜಯಕುಮಾರ್, ಮಂಗಳೂರು ಎಸ್.ಡಿ.ಎಂ.ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್, ಮಂಗಳೂರು ವಕೀಲರ ಸಂಘದ ಕೋಶಾಧಿಕಾರಿ ಗಿರೀಶ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿ.ಕೆ.ಮಾಜಿ ಅಧ್ಯಕ್ಷರುಗಳಾದ ಅಶ್ವನಿ ಕುಮಾರ್ ರೈ,ಸುರೇಶ್ ಪೂಜಾರಿ, ಉಮೇಶ್ ಕುಮಾರ್ ವೈ,ಬಿ.ವಿ.ಶೆಣೈ ಉಪಸ್ಥಿತರಿದ್ದರು.
ಬಂಟ್ವಾಳ ವಕೀಲರ ಸಂಘದ ಕಾರ್ಯದರ್ಶಿ ಕೆ.ನರೇಂದ್ರನಾಥ ಭಂಡಾರಿ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ವೀರೇಂದ್ರ ಎಂ.ಸಿದ್ದಕಟ್ಟೆ ವಂದಿಸಿದರು.
ಕ್ರೀಡಾ ಕಾರ್ಯದರ್ಶಿಗಳಾದ ವಿಜಯರಾಘವೇಂದ್ರ ಮತ್ತು ಕಾವ್ಯ ಅವರು ಕಾರ್ಯಕ್ರಮ ನಿರೂಪಿಸಿದರು.
