ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದ ಗಣೇಶ್ ಕೋಡಿ ನಿವಾಸಿ ರಾಜೇಶ್ವರಿ ಯವರ ಮನೆ ಈಚೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಬೆಂಕಿಗೆ ಅಹುತಿಯಾಗಿರುವ ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಬೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಶಾಸಕರು ವೈಯಕ್ತಿಕ ಧನಸಹಾಯ ಮಾಡಿ ಸರಕಾರದಿಂದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಹಕರಿಸುವುದಾಗಿ ಸಂತ್ರಸ್ತರಿಗೆ ತಿಳಿಸಿದರು.

ಶಾಸಕರ ಭೇಟಿ ವೇಳೆ ಬಿಜೆಪಿ ಶಕ್ತಿಕೇಂದ್ರ ಪ್ರಮುಖ್ ಜಯಪ್ರಸಾದ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ ಪೂಜಾರಿ ಮಾಜಿ ತಾ.ಪಂ ಸದಸ್ಯ ಮಹಾಬಲ ಅಳ್ವ ಬೂತ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಗೌಡ ಬೂತ್ ಕಾರ್ಯದರ್ಶಿ ದಿನೇಶ್ ಅಚಾರ್ಯ ಉಪಸ್ಥಿತರಿದ್ದರು
