ದಿಲ್ಲಿಯಲ್ಲಿ ಅರಳಲಿದೆ ಕಮಲ
ನವದೆಹಲಿ : ನೂತನ ವರ್ಷಾರಂಭದಿಲ್ಲಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಭಾರೀ ಕೆಲಸ ಮಾಡಲಿದೆ ಎಂಬುದು ಅಭಿಮತ ಸಮೀಕ್ಷೆಯ ಅಭಿಪ್ರಾಯ.

ಸಮೀಕ್ಷೆಯ ಪ್ರಕಾರ 70 ಸ್ಥಾನ ಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗಲು ಅವಶ್ಯವಿರುವ 45 ಸ್ಥಾನಗಳು ಸಿಗುವ ಸಾಧ್ಯತೆಗಳು ಈಗ ನಿಚ್ಚಳವಾಗಿ ತೋರಿಬರುತ್ತಿವೆ.

bjp

ಎಬಿಪಿ ನ್ಯೂಸ್‌ – ನೀಲ್ಸನ್‌ ಅಭಿಮತ ಸಂಗ್ರಹ ಸಮೀಕ್ಷೆಯ ಪ್ರಕಾರ ದೆಹಲಿಯಲ್ಲಿ ಬಿಜೆಪಿಯ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಆಮ್‌ ಆದ್ಮಿ ಪಾರ್ಟಿಗೆ ಹೆಚ್ಚೆಂದರೆ 17 ಸ್ಥಾನಗಳು ಸಿಗಲಿವೆ. ಕಳೆದ ಬಾರಿಯ ಚುನಾವಣೆಯಲ್ಲಿ ಎಎಪಿ 28 ಸ್ಥಾನಗಳನ್ನು ಜಯಿಸಿತ್ತು.

ಒಟ್ಟು ಮತಗಳಲ್ಲಿ ಬಿಜೆಪಿಯು ಶೇ.38 ಪಾಲನ್ನು ಪಡೆಯಲಿದೆ. ಆಮ್ ಆದ್ಮಿ ಪಕ್ಷದ ಮತಪಾಲು ಶೇ.27 ಇರಲಿದೆ.

ದೆಹಲಿಯಲ್ಲಿ 49 ದಿನಗಳ ಸರ್ಕಾರ ನಡೆಸಿ ಬಳಿಕ ಕ್ಷುಲ್ಲಕ ಕಾರಣಕ್ಕೆ ರಾಜೀನಾಮೆ ನೀಡಿ ಅಧಿಕಾರದಂದ ಕೆಳಗಿಳಿದ ಕಾರಣಕ್ಕೆ ತನ್ನ ರಾಜಕೀಯ ನೆಲೆಯನ್ನು ಬಹುತೇಕ ಕಳೆದುಕೊಂಡಿರುವ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರ ಉಮೇದ್ವಾರಿಕೆಯನ್ನು ಸಮೀಕ್ಷೆ ಒಳಪಟ್ಟ ಶೇ.43 ಮಂದಿ ಈಗಲೂ ಬೆಂಬಲಿಸುತ್ತಾರೆ !

By suddi9

Leave a Reply

Your email address will not be published. Required fields are marked *