ಕೈಕಂಬ : ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆ, ಆಯುಷ್ಮಾನ್ ಆರೋಗ್ಯ ಮಂದಿರ(ಆಯುಷ್), ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯ ಗುರುಪುರ ಇದರ ಆಶ್ರಯದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಸೆ. ೧೬ರಂದು ಗುರುಪುರದ ಹೋಮಿಯೋಪತಿ ಚಿಕಿತ್ಸಾಲಯದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆಯುಷ್ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.

ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಶ್ರೀದೇವಿ ಮಾತನಾಡಿ, ಸೆ. ೨೩ರಂದು ಆಯುಷ್ ದಿನಾಚರಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಭಿಯಾನ ನಡೆಯುತ್ತಿದೆ. ಪ್ರತಿಯೊಬ್ಬರು ಆರೋಗ್ಯದ ಮೇಲೆ ಕಾಳಜಿ ವಹಿಸಬೇಕು. ದಿನದಲ್ಲಿ ಒಂದಷ್ಟು ಸಮಯ ಯೋಗ, ಧ್ಯಾನಕ್ಕೆ ಮೀಸಲಿಡಬೇಕು. ಮನಸ್ಸಿನ ರೋಗಕ್ಕೆ ಚಿಕಿತ್ಸೆ ಅವಶ್ಯ. ಮಾನಸಿಕ ದೃಢತೆ ಕಾಯ್ದುಕೊಳ್ಳುವುದು ಮುಖ್ಯ ಎಂದರು.

ಅಡ್ಡೂರಿನ ಆಯುಷ್ಮಾನ್ ಆರೋಗ್ಯ ಕೇಂದ್ರದ ಸಿಎಚ್ಒ ಡೇಸಿ ಇಮ್ಯಾನುವಲ್ ಮಾತನಾಡಿ, ೩೦ ವರ್ಷ ದಾಟಿದವರು ೩ ಅಥವಾ ೬ ತಿಂಗಳಿಗೊಮ್ಮೆ ಜನರಲ್ ಚೆಕ್-ಅಪ್ ಮಾಡಿಸಿಕೊಳ್ಳಬೇಕು. ಎದೆನೋವಿನ ಬಗ್ಗೆ ನಿರ್ಲಕ್ಷö್ಯ ಬೇಡ. ಗರ್ಭಿಣಿಯರ ಆರೋಗ್ಯದ ಬಗ್ಗೆ ಎಚ್ಚರ ಅತ್ಯವಶ್ಯ ಎಂದು ಹೇಳಿದರು.
ಮೂಡಬಿದ್ರೆ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಕಲಿಕಾ ವೈದ್ಯ ರಾಜಶೇಖರ್ ಅವರು ಹೋಮಿಯೋಪತಿ, ಆಯುರ್ವೇದ, ಯುನಾನಿ, ಆಯುಷ್ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಚಿಕಿತ್ಸಾಲಯದ ಸಿಬ್ಬಂದಿ ಹರ್ಷಿತಾ ಹಿರಿಯ ನಾಗರಿಕರಿಗೆ ಆರೋಗ್ಯ ಸುರಕ್ಷತೆ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಿಬ್ಬಂದಿ ತುಳಸಿ ಮತ್ತು ಶೋಭಾ ಡಿ. ನಡುಗುಡ್ಡೆ ಸಹಕರಿಸಿದರು. ಹಲವು ಮಂದಿ ಶೀಬಿರದ ಪ್ರಯೋಜನ ಪಡೆದುಕೊಂಡರು.
