ಗುರುಪುರ-ಕೈಕಂಬ ಲಯನ್ಸ್ ಕ್ಲಬ್‌ನಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ಗುರುಪುರ : ಲಯನ್ಸ್ ಜಿಲ್ಲಾ ಗರ‍್ನರ್ ಲ. ಕುಡ್ಪಿ ಅರವಿಂದ ಶೆಣೈ ಅವರ ಆಶಯದಂತೆ ಗುರುಪುರ ರೋಸಾ ಮಿಸ್ತಿಕಾ ಶಾಲಾ ಬಳಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೆ. ೧೩ರಂದು ಆಯೋಜಿಸಲಾದ ಸರಳ ಸಮಾರಂಭದಲ್ಲಿ ಕ್ಲಬ್‌ನ ಜಿಲ್ಲಾ ಸೇವಾ ಪ್ರಧಾನ ಸಂಯೋಜಕ ರಮಾನಂದ ನೂಜಿಪ್ಪಾಡಿ ಅವರು ಫಲಾನುಭವಿ ೫ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.

ಗುರುಪುರ-ಕೈಕಂಬ ಲಯನ್ಸ್ ವಲಯಾಧ್ಯಕ್ಷ ಮೆಲ್ವಿನ್ ಸಲ್ಡಾನ ಅಧ್ಯಕ್ಷತೆ ವಹಿಸಿದ್ದರು. ಲ. ಮಹೇಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಎಲ್‌ಸಿಐಎಫ್ ಸಂಯೋಜಕ ವೆಂಕಟೇಶ್ ಹೆಬ್ಬಾರ್, ಜಿಲ್ಲಾ ಕಾರ್ಯಕ್ರಮಗಳ ಸಂಯೋಜಕ ಓಸ್ವಾಲ್ಡ್ ಡಿ’ಸೋಜ, ಗುರುಪುರ-ಕೈಕಂಬ ಎಂಜೆಎಫ್ ಜೇಸನ್ ಪ್ಯಾರಿಸ್, ಸೇವಾ ಸಂಯೋಜಕ ಜೆಪ್ರಿಯನ್ ತಾವ್ರೊ, ಬಪ್ಪನಾಡು, ಮುಚ್ಚೂರು(ನೀರುಡೆ), ವೇಣೂರು ಮತ್ತು ಗುರುಪುರ-ಕೈಕಂಬ ವಲಯ ಕ್ಲಬ್‌ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೇರಿ ಡಿ’ಸೋಜ ಗುರುಪುರ ಬಂಗ್ಲೆಗುಡ್ಡೆ, ವಾರಿಜಾ ನಡುಗುಡ್ಡೆ, ಶಕುಂತಲಾ ಮಠದಗುಡ್ಡೆ, ಆಜ್ರಮ್ಮ ಮಠದಗುಡ್ಡೆ ಮತ್ತು ಸಿದ್ದಿಕ್ ಕಂದಾವರ ಅವರು ಲಯನ್ಸ್ ಆಹಾರ ಕಿಟ್ ಸ್ವೀಕರಿಸಿದರು. ಬಳಿಕ ಲಯನ್ಸ್ ಕಾರ್ಯಕಾರಿಣಿ ಸಭೆ ನಡೆಯಿತು.



