ಕೈಕಂಬ:ಆಸರೆ ಸೇವಾ ಫೌಂಡೇಷನ್ (ರಿ) ಪುಂಚಮೆ ಮತ್ತು ರಾಮಕೃಷ್ಣತಪೋವನ ಪೊಳಲಿ ಎಸ್‌ಎಸ್‌ಎಲ್‌ಸಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆ.೨೩ ರಂದು ಶನಿವಾರ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಗಾರ ನಡೆಯಿತು.

ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಚಾಲನೆ ನೀಡಿ ವಿದ್ಯಾರ್ಥಿ ಗಳನ್ನು ಕುರಿತು ಮಾತನಾಡಿದರು.

ಆಸರೆ ಸೇವಾ ಫೌಂಡೇಷನ್ ಇದರ ಅಧ್ಯಕ್ಷ ಚಂದ್ರಹಾಸ ಸ್ವಾಗತಿಸಿದರು. ಸಂಪನ್ಮೂಲವ್ಯಕ್ತಿಗಳಾಗಿ ಶ್ರೀ ನಾದ ಮಣಿನಾಲ್ಕೂರು ಮುಖ್ಯಸ್ಥರಾದ ಅರಿವು ಮನೆ ಶೃಂಗೇರಿ ಕುಮಾರಿ ಶ್ವೇತಾ ತುಪ್ಪದಮನೆ ಆಪ್ತಸಮಾಲೋಚಕಿ ಬೆಂಗಳೂರು, ಶ್ರೀ ಶಶಿಸಾತ್‌ಘಟ್ಟ ಜನಸ್ತುಸಂಸ್ಥೆ ತುಮಕೂರು, ಪೊಳಲಿ ವ್ಯ.ಸೇ.ಸ.ಸಂಘದ ಅಧ್ಯಕ್ಷ ವೆಂಕಟೇಶ್‌ನಾವಡ, ಸರಕಾರಿ ಪೌಡ ಶಾಲಾ ಮುಖ್ಯ ಶಿಕ್ಷಕ ಸುಬ್ರಾಯ ಪೈ, ಅಸ್ಮಾ ಕೆಎಸಿ(ಕೆ. ಎಸ್‌.ಎ.ಎಸ್ ) ಆಸರೆ ಸೇವಾ ಫೌಂಡೇಷನ್ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಯ್ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು , ಆಸರೆ ಸೇವಾ ಫೌಂಡೇಷನ್‌ ಇದರ ಸರ್ವ ಸದಸ್ಯರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *