ಕೈಕಂಬ : ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ಕ್ರಾಸ್ ಬಳಿಯಲ್ಲಿ ಪಂಚಾಯತ್ ಸದಸ್ಯ ಸುನಿಲ್ ಫೆರ್ನಾಂಡಿಸ್ ಹಾಗೂ ವಾರ್ಡ್ ಸದಸ್ಯರ ಮುಂದಾಳತ್ವದಲ್ಲಿ ಗ್ರಾಮ ಪಂಚಾಯತ್ ಆಯೋಜಿಸಿದ ೧ರಿಂದ ೪ನೇ `ಆದರ್ಶನಗರ’ ಅಡ್ಡರಸ್ತೆಗಳ ನಾಮಫಲಕ ಉದ್ಘಾಟನಾ ಸಮಾರಂಭ ಆ. ೨೪ರಂದು ನಡೆಯಿತು.

ಆದರ್ಶನಗರ ಅಡ್ಡರಸ್ತೆ ಉದ್ಘಾಟಿಸಿದ ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ ಅವರು ಮಾತನಾಡಿ, ೪ ಅಡ್ಡರಸ್ತೆಗಳಿಗೆ ಸರ್ವಾನುಮತದಿಂದ `ಆದರ್ಶನಗರ’ ಎಂದು ನಾಮಕರಣ ಮಾಡಲಾಗಿದೆ. ಇತರರಿಗೆ ಆದರ್ಶವಾಗಲಿರುವ ಈ ಬಡಾವಣೆಯಲ್ಲಿ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪಂಚಾಯತ್ ತ್ಯಾಜ್ಯ ವಿಲೇವಾರಿ ಘಟಕದೊಂದಿಗೆ ಎಲ್ಲರೂ ಸಹಕರಿಸಬೇಕು. ಪರಿಸರ ಉತ್ತಮವಾಗಿದ್ದರೆ, ರೋಗರುಜಿನಗಳು ಬರುವುದಿಲ್ಲ. ಗಂಜಿಮಠ ಪಂಚಾಯತ್ ವ್ಯಾಪ್ತಿಯ ಕಂಪೆನಿಗಳ ಉದ್ಯೋಗಿಗಳಿಂದ ಭಯದ ವಾತಾವರಣವಿದ್ದರೆ ದೂರು ನೀಡಿ. ಕ್ರಮಕ್ಕೆ ಪ್ರಯತ್ನಿಸುತ್ತೇವೆ ಎಂದರು.

ಅರ್ಚಕ ರಮೇಶ್ ಆಚಾರ್ಯ ಮಳಲಿ ನಾರಳ ಅವರು ಮಾತನಾಡಿ, ಇದು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಕೆಲಸ. ಇಂತಹ ಸಮಾಜಮುಖಿ ಕೆಲಸಗಳಿಂದ ಪಂಚಾಯತ್‌ಗೆ ಉತ್ತಮ ಹೆಸರು ಬರುತ್ತದೆ ಎಂದವರು, ಗಂಜಿಮಠವು ಈಗ ಕೈಗಾರಿಕೋದ್ಯಮ ಹಬ್ ಆಗಿ ಬೆಳೆಯುತ್ತಿದ್ದು, ಉದ್ಯೋಗ ಅರಸಿ ಇಲ್ಲಿಗೆ ಬರುವ ಪರವೂರಿನವರು ಬಾಡಿಗೆ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಪಂಚಾಯತ್‌ನಲ್ಲಿ ಇವರ ಮಾಹಿತಿ ಲಭ್ಯವಾಗಬೇಕು ಎಂದರು.

ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ ಮಾತನಾಡಿ, ಆದರ್ಶನಗರ ಮಾದರಿ ನಗರವಾಗಲಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ. ಗಂಜಿಮಠ ಪಂಚಾಯತ್‌ಗೆ ರಾಜ್ಯ/ರಾಷ್ಟç ಮಟ್ಟದ ಪ್ರಶಸ್ತಿಗಳು ಲಭಿಸುವಂತಾಗಲಿ ಎಂದು ಆಶಿಸಿದರು.

ಸಂತ ಜೋಸೆಫ್ ಕಾನ್ವೆಂಟ್ ಸೂರಲ್ಪಾಡಿಯ ಸಿಸ್ಟರ್ ಜೂಲಿಯಾನ ಶುಭ ಹಾರೈಸಿದರು. ಗಂಜಿಮಠ ಪಂಚಾಯತ್ ಉಪಾಧ್ಯಕ್ಷೆ ಸಾರಮ್ಮ, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ, ಪಂಚಾಯತ್ ಸದಸ್ಯರಾದ ಸುನಿಲ್ ಫೆರ್ನಾಂಡಿಸ್, ಸುನಿಲ್ ಜಿ, ಅನಿತಾ ಡಿ’ಸೋಜ, ಸೌಮ್ಯಾ, ಹಮೀದ್, ಇರ್ಫಾನ್, ಸೀತಾರಾಮ ಪೂಜಾರಿ, ತಮ್ಮಯ್ಯ, ರೇಖಾ, ಬೇಬಿ, ವಿನಯ್ ರೈ, ಗಂಜಿಮಠ ಗ್ರಾಪಂ ಕಾಂಗ್ರೆಸ್ ವಲಯಾಧ್ಯಕ್ಷ ಮುಸ್ತಫ, ಗಂಜಿಮಠ ವ್ಯ.ಸೇ.ಸ. ಸಂಘ(ರಿ) ಅಧ್ಯಕ್ಷ ಶೋಹನ್ ಅತಿಕಾರಿ, ಪೆರಾರ ಚರ್ಚ್ ಉಳಿಪಾಡಿ ಇದರ ಅಧ್ಯಕ್ಷ ಪ್ರವೀಣ್ ಕುಟಿನ್ಹೋ, ಉದ್ಯಮಿ ಶಿವಾನಂದ ಬಂಗೇರ ಹಾಗೂ ಸ್ಥಳೀಯರು ಇದ್ದರು. ನಿರೂಪಿಸಿದ ಪಂಚಾಯತ್ ಸಿಬ್ಬಂದಿ ಉಮೇಶ್ ಮಳಲಿ ವಂದಿಸಿದರು

By suddi9

Leave a Reply

Your email address will not be published. Required fields are marked *