ಕೈಕಂಬ:ಅಡ್ಡೂರು ೩೯ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬೆನಕ ಮಂಟಪದಲ್ಲಿ ಆ.೨೭ ರಂದು ಬುಧವಾರ ಪೊಳಲಿ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ತಂತ್ರಿಯವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಪೊಳಲಿಯ ಪ್ರಧಾನ ಅರ್ಚಕ ಪವಿತ್ರಪಾಣಿ ಪಿ ಮಾಧವ ಭಟ್ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠೆ ಮಾಡಲಿದ್ದಾರೆ.


ಗಣೇಶ್ ಕಟ್ಟೆ ಅಡ್ಡೂರಿನ ಸುಬ್ಬ ರಾವ್ ವೇದಿಕೆಯಲ್ಲಿ ಬೆಳಗ್ಗೆ ೧೦.ಗಂಟೆಯಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ ೧೨ಕ್ಕೆ “ಗಣಹೋಮ ಪೂರ್ಣಾಹುತಿ” ೧೨.೩೦ಕ್ಕೆ ಮಹಾಪೂಜೆ ನೆರವೇರಲಿದೆ.


ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೪ ಗಂಟೆ ತನಕ

ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಯಕ್ಷ ಕೂಟ ತೆಲಿಕೆ ಮೋನೆ ನಿಲಿಕೆ” ಬಾಗವತರಾಗಿ ಶ್ರೀ ಸತ್ಯನಾರಾಯಣ ಪುಣಿಚಿತ್ತಾಯ , ಚೆಂಡೆ ಮದ್ದಳೆ ಪದ್ಮನಾಭ ಉಪಧ್ಯಾಯ ,ಮಯೂರು ನಾಯ್ಗ,ಚಕ್ರತಾಳ ಪೂರ್ಣೇಶ್ ಅಚಾರ್ಯ
ನಕ್ಕುನಗಿಸಲಿದ್ದಾರೆ. ರವಿಕುಮಾರ್ ಸುರತ್ಕಲ್, ಸುಂದರ ಬಂಗಾಡಿ,ಸಂತೋಷ ಕುಲಶೇಖರ, ಸಿ.ಕೆ.ಪ್ರಶಾಂತ್, ರಾಜೇಶ್ ಕೆಂಚನಕೆರೆ ಸಂಯೋಜನೆ ಮಾಧವ ಬಂಗೇರಾ ಕೊಳತ್ತಮಜಲು,

ಸಂಜೆ ೪ ರಿಂದ ಸಮಾರೋಪ ಸಮಾರಂಭ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಆಶೀರ್ವಚನ ನೀಡಲಿದ್ದಾರೆ.

ಅಧ್ಯಕ್ಷತೆಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿವೃತ ಹಿರಿಯ ಪ್ರಬಂಧಕರು
ಶ್ರೀ ವಿಶ್ವೇಶ್ವರ ಭಟ್ ಕಾಂಜಿಲಕೋಡಿ ವಹಿಸಲಿದ್ದಾರೆ. ಮಣಿಪಾಲ ವಿದ್ಯಾ ಸಂಸ್ಥೆಯ ಉಪನ್ಯಾಸಕರು ಶ್ರೀಮತಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಜಪೆ ಪೊಲೀಸ್ ನಿರೀಕ್ಷಕರು ಶ್ರೀ ಸಂದೀಪ್ ಜಿ.ಎಸ್, ಗುರುಪುರ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಯಶವಂತ ಆಳ್ವ, ಗುರುಪುರ ವ್ಯ.ಸೇ.ಸ.ಸಂಘ ಜಿ.ಎಂ. ಉದಯ ಭಟ್ ಗುರುಪುರ, ಕರ್ನಾಟಕ ಚೆಂಡೆ ಸಿಂಗಾರಿ ಮೇಳ ಅಧ್ಯಕ್ಷ ನಾಮದೇವು ಮಂಗಳೂರು , ಸಿಇಓ ಪೊಳಲಿ ಕೃಷಿಪತ್ತಿನ ಸೇವಾ ಸಹಕಾರಿ ಸಂಘ (ನಿ) ಪೊಳಲಿವಿಜಯ ರವಿ ಫೆರ್ನಾಂಡಿಸ್, ಬಾಬಾ ಪಕ್ರುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರು ಮಹಮ್ಮದ್ ಪೊಳಲಿ, ಎಸ್ ಆರ್ ಹಿಂದೂ ಫ್ರೆಂಡ್ಸ್ ಪೊಳಲಿ ಕಾರ್ಯದರ್ಶಿ ರಾಜೇಶ್ ಪಡ್ಪು, ನವೀನ್ ಆಚಾರ್,ಮತ್ತು ಜಿತೇಶ್ ಕುಮಾರ್ ಉಳಿಯ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಸಂಜೆ 6 ಗಂಟೆಗೆ ಉತ್ಸವ ಮಂಟಪದಿಂದ ಕೊಂಬು,ಕಹಳೆ, ಮಂಗಳವಾದ್ಯ,ಶಂಖ,ಜಾಗಂಟೆ ನಿನಾದಗಳೊಂದಿಗೆ ಕುಣಿತ ಭಜನೆ, ವಿವಿಧಛದ್ಮವೇಷಗಳಿಂದ ವೈಭವಪೂರಿತ ಮೆರವಣಿಗೆಯಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಅಡ್ಡೂರು ನೂಯಿ ಮಾರ್ಗವಾಗಿ ಸಾಗಿಬಂದು ಬಡಕಬೈಲ್‌ ತನಕ ಮೆರವಣಿಗೆಯಲ್ಲಿ ಬಂದು ಪವಿತ್ರ ಪಲ್ಗುಣಿ ನದಿಯಲ್ಲಿ ವಿಸರ್ಜಿಸಲಾಗುವುದು.
ಶ್ರೀ ಸಾರ್ವಜನಿಕ ಸೇವಾ ಸಮಿತಿ ಅಧ್ಯಕ್ಷರಾದ ಯಶೋಧರ ಅಡ್ಡೂರು, ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *