ಬಂಟ್ವಾಳ: ತಾಲೂಕಿನನ ಅರಳ ಗ್ರಾಮದ ಪಾಲ್ದಡ್ಕ ಅಂಗನವಾಡಿ ಕೇಂದ್ರದಲ್ಲಿ ನಿರ್ಮಾಣಗೊಂಡ ನೂತನ ಧ್ವಜಸ್ತಂಭದಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಲಾಯಿತು.ನೂತನ ಧ್ವಜಸ್ತಂಭ ಕೊಡುಗೆ ನೀಡಿದ ಬಳಿಕ ಅವರು ಧ್ವಜಾರೋಹಣಗೈದ ಲೋರೆಟ್ಟೋ ಹಿಲ್ಸ್ ರೋಟರಿಕ್ಲಬ್ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್
ಮಾತನಾಡಿ ಶುಭಹಾರೈಸಿದರು.

ಅರಳ ಗ್ರಾಪಂ ಅಧ್ಯಕ್ಷೆ ದೇವಕಿ ಧನ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಡೊಂಬಯ ಅರಳ ಶುಭ ಹಾರೈಸಿದರು.
ಗ್ರಾ. ಪಂ. ಉಪಾಧ್ಯಕ್ಷ ಚಂದ್ರಹಾಸ ಪೂಜಾರಿ, ಸದಸ್ಯ ಪ್ರಸನ್ನ ಶೆಟ್ಟಿ ಅರಳ, ಉದ್ಯಮಿ ಖಾದರ್ ಕುಟ್ಟಿಕಳ, ಕ್ಲಬ್ಬಿನ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ, ಸದಸ್ಯರಾದ ಕೆ. ರಮೇಶ್ ನಾಯಕ್ ರಾಯಿ, ರಾಜೇಶ್ ಶೆಟ್ಟಿ ಸೀತಾಳ, ಸಂತೋಷ್ ಡಿಸೋಜ, ಗೀತಾ ಪಿ. ಬಲ್ಲಾಳ್, ರೂಪಾ ರಾಜೇಶ್ ಶೆಟ್ಟಿ, ಡಾ.ಕ್ಲಾರೆಟ್ ಡಿಸೋಜ, ಶಿಕ್ಷಕಿ ಸುಜಾತ, ಜಯಲಕ್ಷ್ಮಿ, ದಿವ್ಯಾ ಮತ್ತಿತರರು ಇದ್ದರು
