ಬಂಟ್ವಾಳ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತಸಜೀಪ ಮೂಡಗ್ರಾಮದ ಕಂದೂರು ಶ್ರೀ ಕೃಷ್ಣ ಶಿಶು ಮಂದಿರದಲ್ಲಿ ಶ್ರೀ ಕೃಷ್ಣ ವೇಷಧಾರಿ ಪುಟಾಣಿಗಳಿಂದ ಮಡಕೆಗಳನ್ನು ಹೊಡೆದು ಸಂಭ್ರಮಿಸಿದರು.ಬಳಿಕ ಪುಟಾಣಿಗಳಿಂದ ವಿವಿಧ ವಿನೋದಾವಳಿಗಳು ನಡೆಯಿತು.

ಈಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಜೀಪ ಮಾಗ ಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ಜಗತ್ತಿಗೆ ನೀಡಿದ ಸಂದೇಶ ಪಾಲಿಸುವುದರ ಮೂಲಕ ಕೃಷ್ಣ ತತ್ವವನ್ನು ಅನುಷ್ಠಾನಗೊಳಿಸಿ ಸಂಸಾರಿಕ ಗೊಂದಲಗಳಿಂದ ಮುಕ್ತಿಯನ್ನು ಪಡೆಯಬಹುದು ಎಂದು ತಿಳಿಸಿದರು. ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಸುಬ್ರಾಯ ಕಾರಂತ, ಕೆ.ಲಕ್ಷ್ಮೀನಾರಾಯಣ ಭಟ್ ಪದ್ಯಾಣ,ಯಶವಂತ ದೇರಾಜೆಗುತ್ತು, ಸುರೇಶ್ ಐತಾಳ್ , ವಿಜಯಲಕ್ಷ್ಮಿ ಮಯ್ಯ, ಜಗದೀಶ ಐತಾಳ್ ,ಸೋಮನಾಥ, ರಕ್ಷಿತಾ ಮೊದಲಾದವರು ಉಪಸ್ಥಿತರಿದ್ದರು
