ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಮಂಜಲ್ ಪಾದೆ ನೇತ್ರಾವತಿ ಬಳಗದ ಆಶ್ರಯದಲ್ಲಿ 12ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ
ಶುಕ್ರವಾರ ನಡೆಯಿತು.


ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ ಶುಭ ಹಾರೈಸಿದರು. ನೇತ್ರಾವತಿ ಬಳಗದ ಅಧ್ಯಕ್ಷ ರಾಕೇಶ್, ಪಂಚಾಯತ್ ಸದಸ್ಯೆ ಸರೋಜಿನಿ ,ಮಾಜಿ ಪಂಚಾಯತ್ ಸದಸ್ಯ ಪ್ರಮೀಳಾ ಗಟ್ಟಿ, ಪುರಂದರ ಕುಲಾಲ್ ,ಗಣೇಶ್ ಕುಲಾಲ್, ತಿಮ್ಮಪ್ಪಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. 

By suddi9

Leave a Reply

Your email address will not be published. Required fields are marked *