ಪೊಳಲಿ: ಹಿಂದಿನಕಾಲದ ಹಿರಿಯರು ಕೃಷಿಚಟುವಟಿಕೆಯಲ್ಲಿ ತೊಡಗಿಸಿಕೊಂಡು ಗದ್ದೆಯನ್ನು ಎತ್ತು,ಕೋಣಗಳಲ್ಲಿ ಉಳುಮೆ ಮಾಡಿ ಸಾಗುವಳಿ ಮಾಡಿ ಭತ್ತ ಬೆಳೆಯುತ್ತಿದ್ದರು.

ಆ ರೀತಿ ಕೆಸರು ಮಣಿನಲ್ಲಿ ಬೆಲೆಗಳನ್ನು ಬೆಳೆದು ಕೃಷಿ ಸಂಪತ್ತು ಮಾಡುತ್ತಿದ್ದರು ಎಂದು ಪ್ರಗತಿಪರ ಕೃಷಿಕರು ರಮೇಶ್ಚಂದ್ರ ಭಂಡಾರಿ ಪರಕೂರು ಹೇಳಿದರು.

ಅವರು ಕೆಸರ್ ಡೊಂಜಿ ದಿನ ಕೆಸರ್ ಗದ್ದೆ ಕ್ರೀಡಾಕೂಟದ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಪರಿವರ್ತಣಾ ಸಮಯದಲ್ಲಿ ನಶಿಸಿ ಹೋಗುವ ಈ ಸಂದರ್ಭದಲ್ಲಿ ಈಗಿನ ಪೀಲಿಗೆಯ ಜನರಿಗೆ ಕೆಸರ್ಡೋಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡ ಯಕ್ಷಕಲಾ ಸಂಘದ ಯುವಕರು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ .ಇನ್ನಷ್ಠು ಕಾರ್ಯಕ್ರಮ ಮಾಡಲು ಆ ತಾಯಿ ಶಕ್ತಿ ನೀಡಿ ಅನುಗ್ರಹಿಸಲಿ ಎಂದು ಹಾರೈಸಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಯಕ್ಷಗಾನ ನಾಟ್ಯ ಗುರುಗಳು ಶಿಕ್ಷಕ ದೇವದಾಸ್ ಅರ್ಕುಳ ವಹಿಸಿ ಮಾತನಾಡಿ ಶುಭಹಾರೈಸಿದರು. ಇದೇ ಸಂದೃಭದಲ್ಲಿ ಗಣೇಶ್‌ ಶೆಟ್ಟಿ ವರಕೋಡಿ ಇವರನ್ನು ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕೆ.ಎಂ.ಎಫ್ ನಿರ್ದೇಶಕ ನಂದರಾಮ ರೈ ಅಂಬೋಡಿಮಾರ್, ಕಲಾವರ್ಧಕ ಯುವಕ ಸಂಘ ನಾರಳ ಸಂಕೇಶ ಅಧ್ಯಕ್ಷ ಅನ್ವಿತ್ ಸಾಮನಿ ಮಳಲಿ , ಲೋಕೇಶ್ ಪಲ್ಲಿಪಾಡಿ ಮಾಲಕರು ರಾಜು ಸ್ವೀಟ್ಸ್ ಪಲ್ಲಿಪಾಡಿ, ನಾಗಶ್ರೀ ಮಿತೃವೃಂದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾ‌ಮ್‌ ದಾಸ್ ‌, ಬಡಗಬೆಳ್ಳೂರು ಗ್ರಾಮ ಪಂ. ಉಪಾಧ್ಯಕ್ಷ ಚಂದ್ರಹಾಸ ಅಜಿನಡ್ಕ, ವಕೀಲೆ ಶ್ರೀಮತಿ ತೀರ್ಥ ಸೀತಾರಾಮ ಕಮ್ಮಾಜೆ, ಕುಶಕುಮಾರ್ ಸಾಣಕಟ್ಟ ಶಿವ ಇಲೆಕ್ಟ್ರಿಕಲ್ಸ್‌ ಮಾಲಕರು, ಉಧ್ಯಮಿ ಸತೀಶ್ ಬೆಳ್ಳೂರು ಬೆಟ್ಟು, ವೀರ ಯೋಧ ಯಾಧವ ಫ್ರೆಂಡ್ಸ್ ಅಮ್ಮುಂಜೆ ಅಧ್ಯಕ್ಷರು ಉದಯ ಕುಮಾರ್ ಅಮ್ಮುಂಜೆ ,ಯಕ್ಷ ಕಲಾ ಸಂಘದ ಅಧ್ಯಕ್ಷ ರಾಜ್ ಕಿರಣ್ , ಕ್ರೀಡಾಕಾರ್ಯದರ್ಶಿಪುತ್ತುಬಾವ ವರಕೋಡಿ ಭಾಗವಹಿಸಿದ್ದರು. ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ಅಶ್ವಿತ್‌ ಕಾರ್ಯಕ್ರಮ ನಿರೂಪಿಸಿದರು. ದಿನೇಶ್‌ ವರಕೋಡಿ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *