ಗದಗ: ಹೈಟೆಕ್ ದರೋಡೆ ಗ್ಯಾಂಗ್ ಮೇಲೆ ಫೈರಿಂಗ್ ನಡೆಸಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಹಾಗೂ ಡೋಣಿ ಗ್ರಾಮದ ಮಧ್ಯೆ ನಡೆದಿದೆ. ನಟೋರಿಯಸ್ ದರೋಡೆಕೋರನ ಮೇಲೆ ಪೈರಿಂಗ್ ಮಾಡಲಾಗಿದೆ. ಆರೋಪಿ ಕಾಲಿಗೆ ಗುಂಡೇಟು ಬಿದ್ದಿದೆ. ನಟೋರಿಯಸ್ ಆರೋಪಿ ಜಯಸಿಂಹ ಮೊಡಕೆರ್ ಎಂದು ಹೇಳಲಾಗಿದೆ. ರಾಜ್ಯ, ಅಂತರರಾಜ್ಯ ಪೊಲೀಸರಿಗೆ ಬೇಕಾಗಿದ್ದ ಗ್ಯಾಂಗ್ ಇದ್ದಾಗಿತ್ತು. ಮೊಬೈಲ್ ಸಂಪರ್ಕ ಬಿಟ್ಟು ಇನ್ಸ್ಟಾಗ್ರಾಂ ಮೂಲಕ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ.

ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನುಸುತ್ತಿದ್ದ ಗ್ಯಾಂಗ್ ಇದೀಗ ಕೊನೆಗೂ ಗದಗ ಪೊಲೀಸರ ಬಲೆಗೆ ಬಿದ್ದಿದೆ. ಆರೋಪಿಯನ್ನು ಪತ್ತೆ ಮಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಾಗ
ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ ಎಂದು ಹೇಳಲಾಗಿದೆ. ಈ ವೇಳೆ ಸಿಪಿಐ ಮಂಜುನಾಥ ಕುಸುಗಲ್ ಅವರು ಪೈರಿಂಗ್ ಮಾಡಿದ್ದಾರೆ.

ದರೋಡೆ, ಮನೆ ಕಳ್ಳತನ ಸೇರಿದಂತೆ ಹಲವು ಅಪರಾಧ ಮಾಡಿದ್ದ ಜಯಸಿಂಹ ಮಾಡಿದ್ದ ಎಂದು ಹೇಳಲಾಗಿದೆ. ಮೋಸ್ಟ್ ವಾಟೆಂಡ್ ನಟೋರಿಯಸ್ ದರೋಡೆಕೋರ ಗ್ಯಾಂಗ್ ಎಂದು ಹೇಳಲಾಗಿದೆ.
ಮಂಜುನಾಥ ಮೊಡಕೆರ್, ಹಾಗೂ ರಮೇಶ್ ಮೊಡಕೆರ್ ಹಾಗೂ ಜಯಸಿಂಹ ಮೊಡಕೆರ್ ಅವರನ್ನು ಕರೆದುಕೊಂಡು ಬರುವಾಗ ಪೊಲೀಸ್ ವಾಹನದಲ್ಲಿ ಕೈಗೆ ಹಾಕಿದ್ದ ಬೇಡಿಯಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ತಮ್ಮ ರಕ್ಷಣೆಗಾಗಿ ಪೊಲೀಸರು ಪೈರಿಂಗ್ ಮಾಡಿದ್ದಾರೆ. ಗಾಯಾಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗದಗ ಎಸ್ಪಿ ಬಿ ಎಸ್ ನೇಮಗೌಡ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆರೋಪಿ ಜಯಸಿಂಹ ಮೊಡಕೆರ್, ಹಾಗೂ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಆರೋಗ್ಯ ವಿಚಾರಣೆ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *