ಬಜ್ಪೆ: ಉಳಾಯಿಬೆಟ್ಟುವಿನಲ್ಲಿ ನಡೆದ ಹಲ್ಲೆ ಪ್ರಕರಣದ ವಿರುದ್ಧ ಅಲ್ಲಲ್ಲಿ ಹಿಂದೂಗಳು ಬೀದಿಗಿಳಿದು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದರೆ, ಈ ಮಧ್ಯೆ ಬಜ್ಪೆಯಲ್ಲೂ ಹಲ್ಲೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯ್ತು.
ರಸ್ತೆ ಮಧ್ಯೆ ಬಂದ್ ನಡೆಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪೊಲೀಸರ ನಿರ್ಲಕ್ಷ್ಯ ಹಾಗೂ ಮತಾಂಧರ ಹಲ್ಲೆ ವಿರುದ್ಧ ಕೆರಳಿ ಕೆಂಡವಾದರು. ಹಿಂದೂಗಳ ಮೇಲೆ ದಿನನಿತ್ಯ ಎಂಬಂತೆ ಹಲ್ಲೆ ನಡೆಯುತ್ತಲೇ ಇದೆ. ಕಾಂಗ್ರೆಸ್ ಸರಕಾರ ಬಂದ ಮೇಲೆ ದಿನನಿತ್ಯ ಎಂಬಂತೆ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದೆ ಈ ಬಗ್ಗೆ ಯಾರೂ ಕೂಡಾ ಹಿಂದೂಗಳನ್ನು ಕೇಳುವವರಿಲ್ಲ ಎಂಬ ಮಾತುಗಳು ಪ್ರತಿಭಟನೆಯಲ್ಲಿ ಕೇಳಿಬಂದಿತು.


