ಬಜ್ಪೆ: ಅಂಗಡಿಯ ಮುಂದೆ ಪ್ಲಾಸ್ಟಿಕ್ ಚೀಲದ ಕಟ್ಟು ಸಿಕ್ಕ ಬಗ್ಗೆ ಬಜ್ಪೆ ಸೆ.4ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡಗ ಎಡಪದವಿನ ಗೋಪಾಲಕೃಷ್ಣ ದೇವಸ್ಥಾನದ ಬಳಿ ಇರುವ ವಿವೇಕ್ ಭಟ್ ಎಂಬವರ ಅಂಗಡಿಯ ಮುಂದೆ ಈ ಕಟ್ಟು ಸಿಕ್ಕಿದ್ದು ಅದರಲ್ಲಿ ಪ್ರಣಿಯ ಚರ್ಮ, ಎರಡು ಗಂಧದ ತುಂಡುಗಳು ಹಾಗೂ ಬಿಳಿ ಹಾಳೆಯಲ್ಲಿ ಎಮ್.ವಿ ಭಟ್ ಮತ್ತು ಮಾಧವ ಶೆಣೈ ಎಂದು ಬರೆದ ಚೀಟಿ ಇದ್ದು, ಹಾಳೆಯ ಹಿಂಬದಿಯಲ್ಲಿ ನಮ್ಮ ಬೊಲೇರೋ ವಾಹನ ಸಂಖ್ಯೆ ಕೆ.ಎ 19 ಎಮ್.ಸಿ 3246 ಎಂದು ಬರೆಯಲಾಗಿದೆ. ಯಾರೂ ಕಿಡಿಗೇಡಿಗಳು ಮಾಟ ಮಾಡುವ ಉದ್ಧೇಶದಿಂದ ಈ ಕೃತಯ ಎಸಗಿರಬಹುದೆಂದು ಶಂಕಿಸಲಾಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.


