25ನೇ ವರ್ಷದ ವಾರ್ಷಿಕ ಮಹೋತ್ಸವದ ನಿಮಿತ್ತ ಅಮ್ಟೂರು ಶ್ರೀಕೃಷ್ಣ ಮಂದಿರದಲ್ಲಿ 22ನೇ ಭಜನೆ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಶ್ರೀಕೃಷ್ಣ ಮಂದಿರದ ವತಿಯಿಂದ ದಶಂಬರ ತಿಂಗಳಿನಲ್ಲಿ ಈ ಕಾರ್ಯಕ್ರಮ ನಡೆಯಿತು. ಅ. 14 ರಂದು ಆರಂಭಗೊಂಡ ಈ ನಗರ ಭಜನೆಯು ಅ. 27ರಂದು ಸಂಪನ್ನಗೊಂಡಿದ್ದು, ಒಟ್ಟು 12 ದಿನಗಳ ನಗರ ಭಜನೆಯಲ್ಲಿ 365 ಮನೆಗಳಲ್ಲಿ ಭಜನಾ ಸೇವೆ ನಡೆದಿದೆ. ಈ ನಗರ ಭಜನೆ ಕಾರ್ಯದಲ್ಲಿ ಕಜೆ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಶಿವರಾಮ ರೈ ಮೇರಾವು ಇವರು ದೀಪ ಬೆಳಗಿಸಿ ನಗರ ಭಜನೆಗೆ ಚಾಲನೆ ನೀಡಿದರು.

ದಿನಕೊಬ್ಬ ಭಜನೆ ಕಾರ್ಯಕರ್ತ ದೇವರ ಪೂಜೆ ನಡೆಸುತ್ತಿದ್ದು, ಈ ಭಜನೆ ಸಪ್ತಾಹಕ್ಕೆ ಎಲ್ಲಾ ಮನೆಗಳಲ್ಲಿ ಉತ್ತಮವಾದ ಸ್ಪಂದನೆ ದೊರಕಿರುತ್ತದೆ. ಮನೆಯಿಂದ ಮನೆಗೆ ಭಜನೆ ಹೋಗುವಾಗ ಸುತ್ತಮುತ್ತಲಿನ ಮನೆಗಳ ಸದಸ್ಯರು ಈ ಭಜನೆಯಲ್ಲಿ ಸೇರಿಕೊಳ್ಳುತ್ತಿದ್ದರು.

ಮಂದಿರದ ಅಧ್ಯಕ್ಷರಾದ ರಮೇಶ್ ಕರಿಂಗಾಣ, ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು, ಭಜನಾ ಸಂಘಟಕರುಗಳಾದ ಸುರೇಶ ಅಮ್ಟೂರು, ಸುರೇಂದ್ರ ಪೊಯ್ಯಕಂಡ, ಸತೀಶ, ಪುರುಷೋತ್ತಮ ಶಾಂತಿಪಲ್ಕೆ, ಉಮಾನಾಥ ಉಪಾಧ್ಯಕ್ಷರುಗಳಾದ ಶರತ್ ಕುಮಾರ್, ಮಹಾಬಲ ಕುಲಾಲ್, ಕೌಶಿಲ್ ಶೆಟ್ಟಿ, ಕಾರ‍್ಯದರ್ಶಿ ರೋಹಿತ್ ಅಮ್ಟೂರು, ಶೇಖರ ಕೊಟ್ಟಾರಿ, ಲೆಕ್ಕಪರಿಶೋಧಕರಾದ ಶಂಕರ ಅಂಚನ್, ಸರ‍್ಯ ಅಮ್ಟೂರು, ಮತ್ತು ಮಂದಿರದ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಜ್ಯೋತಿ ಮಹಿಳಾ ಮಂಡಲದ ಸದಸ್ಯರುಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *