ಮುಂಬೈ: ಬಾಲಿವುಡ್‘ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಬಳಿ 23 ವರ್ಷದ ಯುವಕನೊಬ್ಬ ಸುಲಿಗೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಗುರುವಾರ ಯುವಕನನ್ನ ಬಂಧಿಸಿದ್ದಾರೆ.

ಆರೋಪಿ ಪ್ರವೀಣ್ ಕುಮಾರ್ ಪ್ರಧಾನ್ ಎಂಬಾತ ನನಗೆ ಬೇಕಾದಷ್ಟು ಹಣವನ್ನ ನನ್ನ ಅಕೌಂಟ್‘ಗೆ ಹಾಕದಿದ್ದರೆ ನಿನ್ನ ಮಕ್ಕಳನ್ನ ಕೊಲ್ಲುವುದಾಗಿ ಮಾಧುರಿ ದೀಕ್ಷಿತ್‘ಗೆ ಬೆದರಿಕೆ ಹಾಕಿ ವಾಟ್ಸಾಪ್ ಮೂಲಕ ಮೆಸೇಜ್ ಮಾಡುತ್ತಿದ್ದನಂತೆ.
ಬಂಧಿತ ಆರೋಪಿ ಮುಂಬೈ ರೆಸ್ಟೋರೆಂಟ್ ಒಂದರ ವೇಟರ್ ಎಂದು ತಿಳಿದುಬಂದಿದೆ.
