11

ನಮೋ ಮೋದಿ ಸಿಡಿ ಸಂಗೀತಗಾರರಿಗೆ ಸನ್ಮಾನ
ಸುದ್ದಿ9ಮಂಗಳೂರು
ನಮೋ ಮೋದಿ ಸಿಡಿಗೆ ಸಂಗೀತ ನೀಡಿದ ಜೆಡಿಎಲ್ ಮ್ಯೂಸಿಕ್ನ ಜೋಯಲ್ ರೆಬೆಲ್ಲೊ, ಡೇರೆಲ್ ಮಾಸ್ಕರೆನ್ನಾಸ್, ಲವಿಟ ಲೋಬೊ ಅವರನ್ನು ಬಿಜೆಪಿ ಪಶ್ಚಿಮ ಶಕ್ತಿ ಕೇಂದ್ರದ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸನ್ಮಾನಿಸಲಾಯಿತು.
ಮಾಜಿ ಸಚಿವ ನಾಗರಾಜ್ ಶೆಟ್ಟಿ ಈ ಸಂದರ್ಭ ಮಾತನಾಡಿ ನಮೋ ಬ್ರಿಗೇಡ್ ಎನ್ನುವ ಕಲ್ಪನೆ ಮಂಗಳೂರಿನಿಂದ ಆರಂಭವಾಗಿ ಇಂದು ದೇಶದಾತ್ಯಂತ ಪ್ರಸಿದ್ಧಿ ಪಡೆದಂತೆ ನಮೋ ಮೋದಿ ಸಿಡಿ ಜನರನ್ನು ತಲುಪಲಿ. ಸಂಗೀತದ ಕಡೆ ಯುವಕರು ಶೀಫ್ರ ಆಕಷರ್ಿತರಾಗುತ್ತಾರೆ. ಹೀಗಾಗಿ ಯುವಕರನ್ನು ನಮೋ ಮೋದಿ ಸಿಡಿ ತಲುಪಲಿದೆ ಎಂದರು. ಕನ್ನಡ, ಕೊಂಕಣಿ, ತುಳುವಿನಲ್ಲಿಯೂ ಸಿಡಿ ಹೊರ ತರುವಂತೆ ಜೆಡಿಎಲ್ ಮ್ಯೂಸಿಕ್ ಕಂಪನಿಗೆ ಸೂಚಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಹೃದಯದ ಮಾತನ್ನು ಜನರಿಗೆ ತಲುಪಿಸುವ ಸುಲಭದ ಸಾಧನ ಸಂಗೀತ. ಸ್ವಾತಂತ್ರ್ಯ ಹೋರಾಟದ ಸಂದರ್ಭ ದೇಶಭಕ್ತಿಗೀತೆಗಳು ಜನರನ್ನು ಜಾಗೃತಿಗೊಳಿಸಿತ್ತು. ನಮೋ ಮೋದಿ ಸಿಡಿ ದೇಶದ ಜನರನ್ನು ತಲುಪಲಿದೆ. ಈ ಬಾರಿಯ ಚುನಾವಣೆ ದೇಶದ ಮುಂದಿನ ಅನಿವಾರ್ಯತೆಯನ್ನು ನಿರ್ಧರಿಸುವ, ಬದಲಾವಣೆಯ ಸಂಕೇತವಾಗಿ ಮೂಡಿಬರಲಿದೆ ಎಂದರು.
ಬಿಜೆಪಿ ದಕ್ಷಿಣ ವಿಧಾನಸಭಾ ಅಧ್ಯಕ್ಷ ರವಿಶಂಕರ್ ಮಿಜಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಯೋಗೀಶ್ ಭಟ್, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಕಿಶೋರ್ ರೈಉಪಸ್ಥಿತರಿದ್ದರು.
ಬಿಜೆಪಿ ಪಶ್ಚಿಮ ಕೇಂದ್ರ ಅಧ್ಯಕ್ಷ ದೀಪಕ್ ಪೈ ಸ್ವಾಗತಿಸಿದರು

By suddi9

Leave a Reply

Your email address will not be published. Required fields are marked *