ಬಂಟ್ವಾಳ: ನಂದನ ಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ‌ ಸಮರ್ಪಣೆ ಮಾಡಲಾಗುವ ನೂತನ ಕೊಡಿಮರದ ( ಧ್ವಜ ಸ್ತಂಭ) ವೈಭವಪೂರ್ಣವಾದ ಮೆರವಣಿಗೆ ಹಾಗೂ ತೈಲಾಧಿವಾಸ ಕಾರ್ಯಕ್ರಮ ಫೆ.04 ರಂದು ಭಾನುವಾರ‌ ನಡೆಯಲಿದೆ‌ ಎಂದು‌ ದೈವಸ್ಥಾನದ ಆಡಳಿತ‌ ಸಮಿತಿ‌ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಭಕ್ತರು ಕೋಡಿಮರವನ್ನು  ಭಜದಲ್ಲಿರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ.ಅಂದು ಬೆಳಿಗ್ಗೆ 7-30ರಿಂದ  ಮೆರವಣಿಗೆ ಆರಂಭವಾಗಲಿದ್ದು,ದೈವಸ್ಥಾನದಲ್ಲಿ ಸಂಪನ್ನಗೊಂಡ ಬಳಿಕ ಸಾರ್ವಜನಿಕ ತೈಲಾಧಿವಾಸ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *