ಕೈಕಂಬ: ಆಗ ನಾನು ರಾಜೀವ ಗಾಂಧಿ ಸಂಪುಟದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿದ್ದೆ  ವೇಳೆ ಜಗದ್ಗುರು ಎರಡನೇ ಸಂತ ಪೋಪ್ ಜಾನ್ ಪಾಲ್ ಭಾರತಕ್ಕೆ ಬಂದಿದ್ದರು. ಈ ವೇಳೆ ಅವರನ್ನು ದೇಶವನ್ನು ಸುತ್ತಿಸುವ ಕಾರ್ಯದ ಹೊಣೆಯನ್ನು ನನಗೆ ಒದಗಿಸಲಾಗಿತ್ತು. ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸಂದರ್ಭ ನನ್ನ ಮಗಳಾದ ಓಶಿಯನ್ ತಪ್ಪಿಸಿಕೊಂಡಿದ್ದಳು. ನಾನು ಭಯದಲ್ಲಿ ತಲ್ಲೀನನಾಗಿದ್ದೆ. ಆತಂಕದಲ್ಲಿ ಏನು ಮಾಡುವುದೆಂದು ತಿಳಿಯದೆ ಕಂಗಾಲಾಗಿ ಪೋಪ್ ಜಾನ್ಪಾಲ್ ಬಳಿಗೆ ಬಂದಾಗ ನನ್ನ ಮಗಳು ಪೋಪರ ತೆಕ್ಕೆಯಲ್ಲಿದ್ದು, ಪೋಪರು ಆಕೆಯನ್ನು ಮುದ್ದಾಡಿಕೊಳ್ಳುತ್ತಿದ್ದರು..
ಹೀಗೆಂದು ಪೋಪರು ಬಂದಿದ್ದ ಗತ ದಿನವನ್ನು ನೆನಪಿಸಿದವರು ಮಾಜಿ ಕೇಂದ್ರ ಸಚಿ ಆಸ್ಕರ್ ಫೆರ್ನಾಂಡೀಸ್ ಅವರು.
ಅವರು ಬಜ್ಪೆಯಲ್ಲಿ  ನಿರ್ಮಾನಗೊಂಡ  ಸಂತ ಪಾಪ್ಜಾನ್ ಪಾಲ್ ಇಗರ್ಜಿಯ ಉದ್ಘಾಟನೆ ಸಮಾರಂಭದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನುಡಿದರು.

 

27 vp bajpe (1)

2612456789101213141516171819202223242527 vp bajpe (2)

27 vp bajpe (3)

30
ನಂತರ ಮಾತಾಡಿದ ಶಾಸಕ ಮೊಯ್ದೀನ್ ಬಾವಾ ಈ ದೇವಾಲಯದಿಂದ ಭಕ್ತರಿಗೆದೇವರ ಅನುಗ್ರಹ ಸಿಗಲಿ. ಕಷ್ಟಕಾರ್ಪಣ್ಯ ದೂರವಾಗಲಿ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಮಾತಾಡಿ ಪೋಪರು ಬಜ್ಪೆಗೆ ಬಂದಿದ್ದಾಗ ಚಿಕ್ಕ ಹುಡುಗ. ನನಗೆ ತೋರಣ ಕಟ್ಟುವ ಕೆಲಸ ನೀಡಿದ್ದರು. ಆಗ ಪೋಪರ ಆಶೀರ್ವಾದ ಪಡೆಯಲು ನೂಕುನುಗ್ಗಲಿನಲ್ಲಿ ಪವೇಶಿಸಿದ್ದೆ. ಆದರೆ ಇದೀಗ ಅವರು ಬಂದ ನೆನಪಿಗಾಗಿ ಕಟ್ಟಿದ ದೇವಾಲಯದ ಕಾರ್ಯಕ್ರಮದಲ್ಲಿ ನನಗೆ ಅತಿಥಿಯಾಗುವ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನನ್ನ ಜೀವನವನ್ನು ಸೇವೆಗಾಗಿ ಮುಡಿಪಾಗಿಡುತ್ತೇನೆ ಇದೆಲ್ಲಾ ಪೋಪರ ಆಶೀರ್ವಾದ ಎಂದು ಹೇಳಿದ್ದಾರೆ.
ಸಂತ ಪಾಪ್ ಜಾನ್ ಪಾಲ್ ಭಾರತಕ್ಕೆ ಬಂದ ಸುದಿನವನ್ನು ನಾನೆಂದಿಗು ಮರೆಯಲಾರೆ. ಇದೀಗ ಅವರ ಶಿಷ್ಯರಾದ ಮೋಸ್ಟ್ ರೆವೆರೆಂಡ್ ಡಾ. ಸಲ್ವತ್ತೋರೆ ಪೆನಾಕಿಯೋ ಅವರು ಭಾರತಕ್ಕೆ ಬಂದು ಎರಡನೇ ಪೋಪ್ ಅವರು ಬಜ್ಪೆಗೆ ಭೇಟಿ ನೀಡಿದ್ದ ಸ್ಮರಣಾರ್ಥ ಸಂತ ಪಾಪ್ ಜಾನ್ ಪಾಲ್ ದೇವಾಲಯ ತೆಲೆಯೆತ್ತಿರುವುದು ಸಂತಸ ತಂದಿದೆ. ಈ ದೇವಾಲಯದಿಂದ ಭಕ್ತರಿಗೆ ದೇವರ ಕೃಪೆ ಸಿಗಲಿ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಫೆ.6,1986ರಂದು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಎರಡನೇ ಪಾಪ್ ಜಾನ್ ಪಾಲ್ ಇದೀಗ ತಲೆ ಯೆತ್ತಿರುವ ಚರ್ಚ್  ಪ್ರದೇಶಕ್ಕೂ ಬಂದಿದ್ದರು. ಅದರ ಸವಿನೆನಪಿಗಾಗಿ ಸಂತ ಜಾನ್ಪಾಲ್ ಚರ್ಚ್  ಬಜ್ಪೆಯಲ್ಲಿ ತಲೆಯೆತ್ತಿದೆ. ಅದರ ಉದ್ಘಾಟನೆಗೆಂದು ನೇಪಾಳ ಹಾಗೂ ಭಾರತದ ಕ್ರೈಸ್ತ ಪ್ರತಿನಿಧಿಯಾಗಿರುವ ಮೋಸ್ಟ್ ರೆವೆರೆಂಡ್ ಡಾ. ಸಲ್ವತ್ತೋರೆ ಪೆನಾಕಿಯೋ ಆಗಮಿಸಿದ್ದರು. ಅವರನ್ನು ಆದರಣೀಂಯವಾಗಿ ಬರಮಾಡಿಕೊಂಡ ಬಳಿಕ ಕ್ರೈಸ್ತ ಮಂದಿರಕ್ಕೆ ಪ್ರವೇಶಿಸಿ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಪವಿತ್ರ ಬೈಬಲ್ನ ಸ್ತುತಿಯನ್ನು ಪಠಿಸಿದ ಬಳಿಕ ಸಂತ ಪೆನಾಕಿಯೋ ಅವರು ದೇವಳವನ್ನು ಪವಿತ್ರಗೊಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಧರ್ಮಪ್ರಾಂತದ ಫಾದರ್ ಗಳು ಆಗಮಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಜೆರಲಾಡ್ ಲೋಬೋ ಸಂದೇಶ ಸಾರಿದರು. ಮೋಸ್ಟ್ ರೆವೆರೆಂಡ್ ಡಾ. ಸಲ್ವತ್ತೋರೆ ಪೆನಾಕಿಯೋ ಅಧ್ಯಕ್ಷರಾಗಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಬಿಷಪ್ ಆದ ಜೆರಾಲ್ಡ್ ಐಸಾಕ್ಲೋಬೋ, ಬಜ್ಪೆ ಚರ್ಚ್ನ ಲಿಯೋಲೋಬೋ, ಶಾಸಕರಾದ ಜೆ ಆರ್ ಲೋಬೋ, ಬಜ್ಪೆ ಪಂಚಾಯತ್ನ ಪ್ರದೀಪ್ ಸುವರ್ಣ, ಕಂದಾವರ ಗ್ರಾಮ ಪಂಚಾಯತ್ನ ವಿಜಯ ಜಿ. ಸುವರ್ಣ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುಂಚೆ ಅಭಯ್ ಚಂದ್ರ ಜೈನ್ ಹಾಗೂ ವಿಜಯ್ ಕುಮಾರ್ ಶೆಟ್ಟಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.

By suddi9

Leave a Reply

Your email address will not be published. Required fields are marked *