ದುಬೈ: ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತನ್ಯಾನಂದ ಸ್ವಾಮೀಜಿಯವರು  ಭಕ್ತರಿಗೆ ಪ್ರವಚನ ನೀಡಲೆಂದು ಇತ್ತೀಚೆಗೆ ದುಬೈಗೆ ತೆರಳಿದ್ದರು. ಪ್ರವಚನ ಕಾರ್ಯಕ್ರಮವನ್ನು ನವೆಂಬರ್ 21ರ ಶುಕ್ರವಾರ ಪೂರ್ವಾಹ್ನ 11 ಗಂಟೆಗೆ ದುಬೈಯ ಫಾರ್ಚೂನ್ ಪ್ಲಾಝಾ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

1 Prvacahana Lighting

2 Pravachan Bhajan

3 Pravachan welcome

4 Pravachan speech

5 Pravachan

6 Pravachan thanks (1)

 

ದುಬಾಯಿಯಲ್ಲಿ ಆಯೋಜಿಸಿದ ಸ್ವಾಮಿ ವಿವೇಕಾ ಚೈತನ್ಯಾನಂದ ಸ್ವಾಮಿಜಿಯರವರಿಂದ ಪ್ರವಚನಭಾರತದಿಂದ ದುಬಾಯಿಗೆ ಆಗಮಿಸಿದ ಕರ್ನಾಟಕ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿಯಲ್ಲಿರುವ ರಾಮಕೃಷ್ಣ ತಪೋವನದ ಸ್ವಾಮಿಜಿ, ಸ್ವಾಮಿ ವಿವೇಕಾ ಚೈತನ್ಯಾನಂದ ರವರ ಪ್ರವಚನ ಕಾರ್ಯಕ್ರಮ ದುಬಾಯಿ ಫಾರ್ಚೂನ್ ಪ್ಲಾಝಾ ಹೋಟೆಲ್ ಸಭಾಂಗಣದಲ್ಲಿ 2014 ನವೆಂಬರ್ 21 ಶುಕ್ರವಾರ ಪೂರ್ವಾಹ್ನ 11 ಗಂಟೆಗೆ ಆಯೋಜಿಸಲಾಗಿತ್ತು.

ಪ್ರಾರಂಭದಲ್ಲಿ ವರಮಹಾಲಕ್ಷ್ಮೀ ಸಮಿತಿ ದುಬಾಯಿ ಇದರ ಸುಮಂಗಲೆಯರು  ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜರಾಜೇಶ್ವರಿ ಭಜನಾ ತಂಡದವರು ಭಕ್ತಿ ಸಂಗೀತ ಸೇವೆಯನ್ನು ನಡೆಸಿದರು. ರಾಜೇಶ್ ಕುತ್ತಾರ್  ಸ್ವಾಗತಿಸಿದರು. ಜೀವನ್ ಶೆಟ್ಟಿಯವರು ಸ್ವಾಮಿ ವಿವೇಕಾ ಚೈತನ್ಯಾನಂದ ರವರ ಪೂರ್ಣ ಪರಿಚಯ ಮತ್ತು ರಾಮಕೃಷ್ಣ ತಪೋವನದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದರು.

By suddi9

Leave a Reply

Your email address will not be published. Required fields are marked *