ಬಂಟ್ವಾಳ: ಆರೋಗ್ಯ ರಕ್ಷಾ ಕವಚ ವಾಹನ ಗ್ರಾಮದ ರಾಷ್ಟ್ರೀಯ ಸಂಪತ್ತು. ಅದನ್ನು ಸಾರ್ವಜನಿಕರೆಲ್ಲೂ ಸದುಪಯೋಗ ಪಡಿಸಿಕೊಳ್ಳ ಬೇಕು. ಆರೋಗ್ಯ ಸೇವೆ ಎಲ್ಲರಿಗೂ ದೊರೆಯುವಂತಾಗಲು ಅದರ ಸಿಬ್ಬಂದಿಗಳಿಗೆ ಸಂಪೂರ್ಣ ಸಹಕಾರ ನೀಡ ಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.

ರಾಜ್ಯ ಆರೋಗ್ಯ ಮತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಇಂಟರ್ಲಾಕ್ ಅಳವಡಿಕೆಗೆ ಗುದ್ದಲಿ ಪೂಜೆ ನೆರವೇರಿಸಿದರು.

BTW_NOV26_12

26- nisane

ಅವರು ಬುಧವಾರ ಸಂಜೆ ಪುದು ಗ್ರಾಮ ಹಾಗೂ ಅದರ ಸುತ್ತಮುತ್ತಲಿನ ಗ್ರಾಮದ ಜನತೆಯ ಅನುಕೂಲಕ್ಕಾಗಿ ಬಿಡುಗಡೆಗೊಳಿಸಲಾದ 108 ಅಂಬ್ಯುಲೆನ್ಸ್ ಸೇವೆಗೆ ಹಸಿರು ನಿಶಾನೆ ತೋರಿಸಿ, ಫರಂಗಿಪೇಟೆ ಬಸ್ಸು ನಿಲ್ದಾಣ ಮತ್ತು ರಿಕ್ಷಾ ಪಾರ್ಕಿಂಗ್  ಇಂಟರ್ಲಾಕ್ ಅಳವಡಿಕೆಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.

ರಾಜ್ಯದ್ಯಂತ ಒಟ್ಟು 198 ಆರೋಗ್ಯ ರಕ್ಷಾ ಕವಚ ವಾಹನಗಳನ್ನು ಹೊಸದಾಗಿ ಬಿಡುಗಡೆಗೊಳಿಸಲಾಗಿದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಮಂಗಳೂರು ವಿಧಾನ ಸಭಾ ವ್ಯಾಪ್ತಿಯ ತಲಪಾಡಿ, ಮುಡಿಪು, ನಾಟೆಕಲ್, ಉಳ್ಳಾಲ ಸೇರಿದಂತೆ ಫರಂಗಿಪೇಟೆಗೂ 108 ವಾಹನದ ಸೌಲಭ್ಯವನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಪುದು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳ ಬಹುದಾಗಿದೆ ಎಂದರು.

ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷ ಮಹಮ್ಮದ್ ಶರೀಪ್, ಮೇರಮಜಲು ಗ್ರಾಮಪಂಚಾಯತ್ ಅಧ್ಯಕ್ಷೆ ವೃಂದಾ ಪೂಜಾರಿ, ತಾ.ಪಂ.ಸದಸ್ಯ ಆಸೀಪ್ ಇಕ್ಬಾಲ್, ಪುದು ಗ್ರಾ.ಪಂ.ಸದಸ್ಯ ಅಖ್ತರ್ ಹುಸೈನ್, ಪ್ರಮುಖರಾದ ಮಹಮ್ಮದ್ ಬಾವಾ, ಉದ್ಯಮಿ ಇಸುಬು, ಸೇವಾಂಜಲಿ ಪ್ರತಿಷ್ಠಾನ ಕೃಷ್ಣಕುಮಾರ್ ಪೂಂಜಾ, ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್, ಜಿವಿಕೆಯ ಜಿಲ್ಲಾ ಮುಖ್ಯಸ್ಥ ಮಹಾಬಲ, ಎಂ.ಕೆ.ಖಾದರ್, ಆಸೀರ್, ಝಾಹೀರ್, ಅನಿಲ್ ಫೆರ್ನಾಂಡೀಸ್, ಟಿ.ಕೆ.ಬಶೀರ್ ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *