ಬಂಟ್ವಾಳ :ಬಿ.ಸಿ.ರೋಡಿಗೆ ಸಮೀಪದ ಕೈಕಂಬದಲ್ಲಿರುವ ವಸತಿ ಸಂಕೀರ್ಣವೊಂದರ ಮೂರು ಮಹಡಿಯಲ್ಲಿ ಡಿಶ್ ರಿಪೇರಿ ಮಾಡುತ್ತಿದ್ಧ ಯುವಕನೋರ್ವ  ಆಯತಪ್ಪಿ ಕೆಳಗೆ ಬಿದ್ದು  ಗಂಭೀರವಾಗಿ ಗಾಯಗೊಂಡುಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟ ಘಟನೆ  ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ.


  ಬಂಟ್ವಾಳ ಸಮೀಪದ ಆಚಾರಿಪಲ್ಕೆ ನಿವಾಸಿ ಯತೀಶ್ (32) ಮೃತಪಟ್ಟ ದುರ್ದೈವಿ. ಕೈಕಂಬದ ಹೋಲಿ ಪ್ಯಾಮಿಲಿ ವಸತಿ ಸಂಕೀರ್ಣದ ಮನೆಯೊಂದರ ಡಿಶ್ ರಿಪೇರಿ ಮಾಡುವ ವೇಳೆ ಆಯತಪ್ಪಿ ಕೆಳಗಿದ್ದ  ಬಾವಿಗೆ ಹಾಕಲಾದ ಕಬ್ಬಿಣದ ರಕ್ಷಣಾ ಬೇಲಿಯ ಮೇಲೆ ಬಿದ್ದು ತಲೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು.


ತಕ್ಷಣ ಮಿಲಾದುನ್ನಭಿ ಸಂಘದ ನುಸ್ರತ್ ಅಂಬ್ಯುಲೆನ್ಸ್ ಚಾಲಕ ಸಮಾದ್ ಕೈಕಂಬ ಅವರು ಕೇವಲ 16 ನಿಮಿಷಗಳಲ್ಲಿ   ಗಾಯಾಳುವನ್ನು ಸಾಗಿಸಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. 


ಆದರೆ  ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದ್ದು,ಈತನನ್ನು ಪರೀಕ್ಷಿಸಿದ ವೈದ್ಯರು  ಕೊನೆಯುಸಿರೆಳೆದಿರುವುದನ್ನು ದೃಡಪಡಿಸಿದ್ದರು.  ಈ ಬಗ್ಗೆ ಬಂಂಟ್ವಾ ‌ನಗರ ಠಾಣೆಯಲ್ಲಿ ಕೇಸು   ದಾಖಲಾಗಿದೆ. 

By Suddi9

Leave a Reply

Your email address will not be published. Required fields are marked *