ಸುದ್ದಿ9 ಕೈಕಂಬ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ವಿಠೋಭ ಭಜನಾ ಮಂದಿರದಲ್ಲಿ ಮಂಗಳವಾರ ಸೂರ್ಯ ಹಸ್ತದಿಂದ ಮರುದಿನ ಸೂಯೋದಯದವರೆಗೆ ಭಜನಾ ಮಂಗಳೋತ್ಸವ ನಡೆಯಿತು.


ನ.18ರಂದು ಮಂಗಳವಾರ ಬೆಳಗ್ಗೆ ಗಣಹೋಮ ನೆರವೇರಿಸಿ ಸಾಯಂಕಾಲ ಸೂರ್ಯ ಹಸ್ತದಲ್ಲಿ ವಿಷ್ಣು ಮುರ್ತಿ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ವಿಠೋಭ ಭಜನಾ ಮಂಡಳಿಯವರಿಂದ ಭಜನಾ ಪ್ರಾರಂಂಭಗೊಂಡಿತು. ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆದು ಬುಧವಾರ ಬೆಳಗ್ಗೆ ಮಂಗಳೋತ್ಸವ ನಡೆಯಿತು.

